ಸುಳ್ಯದ ಐವರ್ನಾಡಿನ ಪ್ರಗತಿಪರ ಕೃಷಿಕನಿಗೊಲಿದ ‘ಐಕಾನಿಕ್ ಆಫ್ ಇಂಡಿಯನ್ ಅವಾರ್ಡ್ 2023 ‘

0
115

ಪ್ರಗತಿಪರ ಕೃಷಿಕರೆಂದೇ ಖ್ಯಾತಿ ಗಳಿಸಿರುವ ಸಿ. ಕೆ. ನವೀನ್ ಚಂದ್ರ ಚಾತುಬಾಯಿ ಅವರಿಗೆ ಕೃಷಿ ಕ್ಷೇತ್ರದ ಸಾಧನೆಗಾಗಿ 2023ರ “ಐಕಾನಿಕ್ ಆಫ್ ಇಂಡಿಯನ್ ಅವಾರ್ಡ್” ಪ್ರಶಸ್ತಿ ಲಭಿಸಿದೆ.

ನ.10ರಂದು ಮಂಗಳೂರಿನ ರಾಣಿ ಅಬ್ಬಕ್ಕ ವಿಹಾರನೌಕೆಯಲ್ಲಿ ನಡೆದ 42ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಮಹೋತ್ಸವ ಕಾರ್ಯಕ್ರಮದಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಇಂಟರ್ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ (ICFC) ಮುಖ್ಯಸ್ಥರಾದ ಕೆ.ಪಿ. ಮಂಜುನಾಥ ಸಾಗರ್, ಬೆಹರೆನ್ ಕನ್ನಡ ಸಂಘದ ಅಧ್ಯಕ್ಷ ರಾಜಕುಮಾರ ಭಾಸ್ಕರ್, ಪೊಲೀಸ್ ಅಧಿಕಾರಿ ಗೋಪಾಲಕೃಷ್ಣ ಬಜ್ಪೆ, ಕೆ.ಎ.ಎಸ್. ಅಧಿಕಾರಿ ಜಿ.ಕುಮಾರ ನಾಯ್ಕ, ಮಾಧವರಾವ್ ಮಂಗಳೂರು, ರೇಣುಕಾ ಪ್ರಸಾದ್ ರಾಮನಗರ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here