ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ಹಲವಾರು ಕಡೆ ಕಾಡಾನೆಗಳ ಹಾವಳಿ

0
90

ಕಡಬ : ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ರೆಂಜಾಳದ ಶೂರಪ್ಪ ಗೌಡ ಮತ್ತು ಉಮೇಶ ಗೌಡ ಇವರ ತೋಟದಲ್ಲಿ ಫಸಲು ನೀಡುತ್ತಿರುವ ತೆಂಗು ,ಬಾಳೆ,ಹಾಗೂ ಅಡಿಕೆ ಮರಗಳನ್ನು ಕಳೆದ ರಾತ್ರಿ ಕಾಡಾನೆಗಳು ನಾಶಮಾಡಿರುವುದಾಗಿ ತಿಳಿದು ಬಂದಿದೆ.

ಸಿರಿಬಾಗಿಲು ಗ್ರಾಮದ ರೆಂಜಾಳ,ಪೆರ್ಜೆಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಆನೆ ದಾಳಿಯಿಂದ ಕೃಷಿ ನಾಶವಾಗಿದೆ.

ಕಾಡಾನೆಗಳ ದಾಳಿ ತಡೆಗೆ ಸೂಕ್ತ ಕ್ರಮ ಕೈಗೊಂಡು ನಾಶವಾದ ಬೆಳೆಗೆ ಪರಿಹಾರ ನೀಡಬೇಕಾಗಿ ಊರವರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here