ಟೆಲ್ ಅವೀವ್: ಪ್ಯಾಲೆಸ್ತೇನ್ ಕಾರ್ಮಿಕರ ಬದಲು ಭಾರತದ ಕಾರ್ಮಿಕರನ್ನು ನೇಮಿಸಿಕೊಳ್ಳಲು ಇಸ್ರೇಲ್ ಈಗ ಮುಂದಾಗಿದೆ.
ಹಮಾಸ್ ಜೊತೆಗಿನ ಯುದ್ಧದ ನಂತರ 90 ಸಾವಿರ ಪ್ಯಾಲೆಸ್ತೇನ್ ಕಾರ್ಮಿಕರ ಕೆಲಸದ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಈಗ ಪ್ಯಾಲೆಸ್ತೇನ್ ಪ್ರಜೆಗಳ ಬದಲಿಗೆ 1 ಲಕ್ಷ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಕಂಪನಿಗಳಿಗೆ ಅನುಮತಿ ನೀಡುವಂತೆ ಇಸ್ರೇಲಿ ನಿರ್ಮಾಣ ಉದ್ಯಮವು ಸರ್ಕಾರವನ್ನು ಕೇಳಿದೆ ಎಂದು ವರದಿಯಾಗಿದೆ.
ಮೇ ತಿಂಗಳಲ್ಲಿ ಇಸ್ರೇಲ್ ಭಾರತದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇಸ್ರೇಲ್ 42 ಸಾವಿರ ಭಾರತೀಯರಿಗೆ ಇಸ್ರೇಲ್‌ನಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತದೆ. ನಿರ್ಮಾಣ ಮತ್ತು ನರ್ಸಿಂಗ್ ಕ್ಷೇತ್ರಗಳಲ್ಲಿ 42 ಸಾವಿರ ಭಾರತೀಯ ಕಾರ್ಮಿಕರಿಗೆ ಉದ್ಯೋಗಕ್ಕೆ ಅನುಮತಿ ನೀಡುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ತಮ್ಮ ದೇಶದ ಮೇಲಿನ ದಾಳಿ ದೇಶದಲ್ಲಿ ಉದ್ಯೋಗದಲ್ಲಿದ್ದ ಪ್ಯಾಲೆಸ್ತೀನ್ ಕಾರ್ಮಿಕರು ಕಾರಣ. ಅವರು ನಮ್ಮ ದೇಶದ ಬಗ್ಗೆ ಹಮಾಸ್ ಉಗ್ರರಿಗೆ ಮಾಹಿತಿ ನೀಡಿದ್ದರು ಎಂಬ ಕಾರಣ ನೀಡಿ ಇಸ್ರೇಲ್ ಕಳೆದ ವಾರ ಗಾಜಾಗೆ ಗಡಿಪಾರು ಮಾಡಿದೆ.
ಪ್ಯಾಲೆಸ್ತೇನ್ ಜೊತೆಗಿನ ಸಂಬಂಧ ಸುಧಾರಣೆಯಾಗುತ್ತಿದ್ದಂತೆ ಇಸ್ರೇಲ್ ಪ್ಯಾಲೆಸ್ತೇನ್ ಪ್ರಜೆಗಳಿಗೆ ಮಾನವೀಯ ದೃಷ್ಟಿಯಿಂದ ಕೆಲ ವರ್ಷಗಳಿಂದ ದೇಶದಲ್ಲಿ ಉದ್ಯೋಗ ನೀಡಿತ್ತು. ಉದ್ಯೋಗ ಪಡೆದ ಪ್ರಜೆಗಳು ಹಮಾಸ್ ಉಗ್ರರ ಜೊತೆ ಕೈ ಜೋಡಿಸಿದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಅವರನ್ನು ಇಸ್ರೇಲ್ ಗಡಿಪಾರು ಮಾಡಿದೆ.