ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಅನಾಮಧೇಯ ಬಾಕ್ಸ್ ಪತ್ತೆ

0
102

ಶಿವಮೊಗ್ಗ: ಶಿವಮೊಗ್ಗ ರೈಲು ನಿಲ್ದಾಣದ ಪಾರ್ಕಿಂಗ್ ಲಾಟ್ ನಲ್ಲಿ ಎರಡು ಅನಾಮಧೇಯ ಬಾಕ್ಸ್ ಗಳು ಪತ್ತೆಯಾಗಿದ್ದು ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ.

ಶನಿವಾರದಿಂದ ಎರಡು ಬಾಕ್ಸ್ ಗಳು ರೈಲು ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಕಂಡು ಬಂದಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಯಾರೂ ಹತ್ತಿರ ಹೋಗದಂತೆ ಪೊಲೀಸರು ಬ್ಯಾರಿಕೇಡ್ ಇಟ್ಟು ನಿಗಾ ವಹಿಸಿದ್ದಾರೆ.

ಎರಡು ಬಾಕ್ಸ್ ಗಳಲ್ಲಿ ಏನಿದೆ ಎಂಬುದು ಇನ್ನು ತಿಳಿದು ಬಂದಿಲ್ಲ ಆದರೆ ಬಾಕ್ಸ್ ಮೇಲೆ ಫುಡ್ ಗ್ರೈನ್ಸ್ ಅಂಡ್ ಶುಗರ್ಸ್ ಎಂದು ಬರೆದಿದ್ದು ಯಾರಿಗೆ ಸೇರಿದ್ದು ಎಂದು ಇನ್ನೂ ತಿಳಿದು ಬಂದಿಲ್ಲವಾಗಿದೆ.

ಅನಾಮಧೇಯ ಬಾಕ್ಸ್ ಪತ್ತೆಯಾದ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದ್ದು ಅಲ್ಲದೆ ಬಾಕ್ಸ್ ಪರಿಶೀಲನೆಗೆ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನದಳ ಸ್ಥಳಕ್ಕೆ ದೌಡಾಯಿಸಿದೆ.

ಕಳೆದ ನಾಲ್ಕೈದು ದಿನಗಳಿಂದ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ಅದರ ಬೆನ್ನಲ್ಲೇ ಅನಾಮಧೇಯ ಬಾಕ್ಸ್ ಪತ್ತೆಯಾಗಿದೆ.

LEAVE A REPLY

Please enter your comment!
Please enter your name here