ಸುಳ್ಯದ ಉಡುಪಿ ಗಾರ್ಡನ್ ಹೋಟೆಲ್ ಬಳಿ ಭೂಮಿ ಕುಸಿತ

0
145

ಸುಳ್ಯ : ಇದೀಗ ಕೆಲ ಸಮಯಗಳ ಹಿಂದೆ ಸುರಿದ ಭಾರೀ ಮಳೆಗೆ ಸುಳ್ಯದ ಉಡುಪಿ ಗಾರ್ಡನ್ ಹೋಟೆಲ್ ಮುಂದೆ ಭೂಮಿ ಕುಸಿದು ಸುಮಾರು ಹತ್ತು ಅಡಿಯಷ್ಟು ಹೊಂಡ ನಿರ್ಮಾಣವಾಗಿದೆ.

ಪಕ್ಕದಲ್ಲೇ ವಿದ್ಯುತ್ ಕಂಬ ಇರುವುದರಿಂದ ಈ ಹೊಂಡಕ್ಕೆ ವಿದ್ಯುತ್ ಕಂಬ ಬೀಳುವ ಆತಂಕ ಎದುರಾಗಿದೆ.

ಸ್ಥಳೀಯರು ಈ ಕುರಿತು ಮೆಸ್ಕಾಂನವರಿಗೆ ಮಾಹಿತಿ ನೀಡಿದ್ದು ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here