ಬೀಜಿಂಗ್ : ಚೀನಾದ ಮಾಜಿ ಪ್ರಧಾನಿ ಲಿ ಕೆಕಿಯಾಂಗ್ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಚೀನಾದ ಮಾಧ್ಯಮ ಸಂಸ್ಥೆ ವರದಿ ಮಾಡಿದೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಚೀನಾದ ಸರ್ಕಾರಿ ಟಿವಿ ಚಾನೆಲ್ ಸಿಸಿಟಿವಿ ವರದಿ ಪ್ರಕಾರ, ಲಿ ಕೆಕಿಯಾಂಗ್ ಶಾಂಘೈನಲ್ಲಿ ಇದ್ದ ಸಂದರ್ಭ ಅಕ್ಟೋಬರ್ 26 ರಂದು ಹಠಾತ್ ಹೃದಯಾಘಾತಕ್ಕೆ ಒಳಗಾದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಉಳಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದವು.ಅಕ್ಟೋಬರ್ 27 ರಂದು ಅವರು ನಿಧನರಾದರು ಎಂದು ಹೇಳಿದೆ.