ಸುಳ್ಯ : ಸುಳ್ಯದ ಕನಕಮಜಲು ಮೂಲದ ಐಶ್ವರ್ಯ ಎಂಬವರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಇವರು ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ಸುಬ್ರಹ್ಮಣ್ಯ ಗೌಡ ಹಾಗೂ ಉಷಾ ದಂಪತಿಯ ಪುತ್ರಿ ಎಂದು ತಿಳಿದು ಬಂದಿದೆ.
ಐಶ್ವರ್ಯ ಅವರನ್ನು ಕಳೆದ ಕೆಲ ವರ್ಷದ ಹಿಂದೆಯಷ್ಟೇ ರಾಜೇಶ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು.
ಮದುವೆಯಾದ ಬಳಿಕ ಐಶ್ವರ್ಯರವರು ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಪತಿ ರಾಜೇಶ್ ಸ್ವಂತ ಐಸ್‌ಕ್ರೀಮ್ ಪಾರ್ಲರ್ ನಡೆಸಿಕೊಂಡು ಬೆಂಗಳೂರಿನ ಸ್ಯಾಟ್‌ಲೈಟ್ ಸಮೀಪ ವಾಸವಾಗಿದ್ದರೆಂದು ತಿಳಿದು ಬಂದಿದೆ.
ಈ ದುರ್ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಐಶ್ವರ್ಯ ಅವರು ತಂದೆ ಸುಬ್ರಹ್ಮಣ್ಯ ಗೌಡ ಮದುವೆಗದ್ದೆ, ತಾಯಿ ಶ್ರೀಮತಿ ಉಷಾ , ಪತಿ ರಾಜೇಶ್ ಕಾಪಿಲ, ಸಹೋದರ ಸೂರ್ಯ, ಮಾವ ಗಿರಿಯಪ್ಪ ಗೌಡ ಕಾಪಿಲ ಸೇರಿದಂತೆ ಅಪಾರ ಬಂಧು -ಬಳಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.