ಸುಳ್ಯ: ತೋಟಗಳಿಗೆ ಕಾಡಾನೆ ದಾಳಿ

0
89

ಸುಳ್ಯ : ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ದಲ್ಲಿ ತೋಟಗಳಿಗೆ ಕಾಡಾನೆ ದಾಳಿ ಮುಂದುವರಿದಿದೆ.

ಕಳೆದ ವಾರ ಇಲ್ಲಿನ ಚಾಕೋಟೆ ಭಾಗದ ತೋಟಗಳಿಗೆ ಕಾಡಾನೆ ಹಿಂಡು ಲಗ್ಗೆ ಇಟ್ಟು ಕೃಷಿ ಹಾನಿಗೊಳಿಸಿತ್ತು. ಈ ವಾರ ದಲ್ಲಿ ಮೂರು ದಿನಗಳಿಂದ ಚಾಕೋಟೆ, ಬೊಳುಗಲ್ಲು ಭಾಗದಲ್ಲಿ ಆನೆಗಳು ಕೃಷಿ ಹಾನಿ ಮಾಡಿವೆ.

ಜಗದೀಶ್‌ ಅವರ ತೋಟದಲ್ಲಿ ತೆಂಗಿನ ಗಿಡ, ಅಡಿಕೆ ಮರ, ಬಾಳೆ ಗಿಡಗಳನ್ನು ಮಗುಚಿ, ಹಾನಿಗೊಳಿಸಿವೆ. ನೀರಾವ‌ರಿ ಪೈಪ್‌ಗ್ಳನ್ನು ಪುಡಿ ಮಾಡಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here