ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆ

By: Ommnews

Date:

Share post:

ಕಡಬ :ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕೇರ್ಪಡ ಸುಂದರ ಗೌಡ ಅವರ ತೋಟದಲ್ಲಿನ ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾದ ಘಟನೆ ಬುಧವಾರ ನಡೆದಿದೆ.

Advertisement
Advertisement
Advertisement

ಬೆಳಗ್ಗೆ ಮನೆಯವರು ತೋಟಕ್ಕೆ ಅಡಿಕೆ ಹೆಕ್ಕಲೆಂದು ಹೋದಾಗ ಕೆರೆಯಲ್ಲಿ ಮೃತದೇಹ ತೇಲುತ್ತಿರುವುದು ಕಂಡುಬಂತು. ಅನಂತರ ಊರವರು ಸ್ಥಳಕ್ಕೆ ಆಗಮಿಸಿದರು.

ಮೃತರನ್ನು ಕೇರ್ಪಡ ದಿ| ಹುಕ್ರ ಅವರ ಪತ್ನಿ ಗಿರಿಜಾ (50) ಎಂದು ಗುರುತಿಸಲಾಗಿದೆ.

ಗಿರಿಜಾ ಅವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

Share post:

LEAVE A REPLY

Please enter your comment!
Please enter your name here