‘ನಾರಿಶಕ್ತಿ’ ಪ್ರಶಸ್ತಿ ಪುರಸ್ಕೃತೆ ಕಾರ್ತ್ಯಾಯಿನಿ ಅಮ್ಮ ನಿಧನ

0
139

ಕೇರಳ : ದೇಶದ ಅತೀ ಹಿರಿಯ ಸಾಕ್ಷರತಾ ವಿದ್ಯಾರ್ಥಿನಿ ಕೇರಳದ ಕಾರ್ತ್ಯಾಯಿನಿ ಅಮ್ಮ ಆಲಪ್ಪುಳ ಜಿಲ್ಲೆಯ ಹರಿಪಾಡ್ ಮುತ್ತುಲ್ಲದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 101 ವರ್ಷ ವಯಸ್ಸಾಗಿತ್ತು.

ಕೇರಳ ಸರ್ಕಾರದ ‘ಅಕ್ಷರಲಕ್ಷಂ’ ಪರೀಕ್ಷೆಯಲ್ಲಿ ಕಾರ್ತ್ಯಾಯಿನಿ ಅಮ್ಮ ಟಾಪರ್ ಆಗಿದ್ದರು. 40,000 ಮಂದಿ ಈ ಪರೀಕ್ಷೆ ಬರೆದಿದ್ದು, ಇದರಲ್ಲಿ ಕಾರ್ತ್ಯಾಯಿನಿ ಅವರು 98 ಪರ್ಸೆಂಟ್ ಮಾರ್ಕ್ಸ್‌ ಪಡೆದಿದ್ದರು.

2018ರಲ್ಲಿ, ನಾರಿಶಕ್ತಿ ಪ್ರಶಸ್ತಿಯನ್ನು ಗೆದ್ದರು. ಕಳೆದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ನಾರಿಶಕ್ತಿ ಪ್ರಶಸ್ತಿ ವಿಜೇತೆ ಕಾರ್ತ್ಯಾಯಿನಿ ಅಮ್ಮನವರ ಸ್ತಬ್ಧಚಿತ್ರ ಸಹ ಸೇರಿತ್ತು.

‘ವಯಸ್ಸಿನ ಹೊರತಾಗಿಯೂ,ಕಲಿಯುವ ಇಚ್ಛೆ ನೂರಾರು ಮಹಿಳೆಯರಿಗೆ ಸ್ಫೂರ್ತಿಯಾಗಿದೆ.ಕಾರ್ತ್ಯಾನಿಯಮ್ಮ ಕೇರಳದ ಹೆಮ್ಮೆ. ನಾವು ಆದರ್ಶಪ್ರಾಯ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದೇವೆ’ ಎಂದು ಕಾರ್ತ್ಯನಿಯಮ್ಮ ನಿಧನಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here