ಗಾಜಾದಲ್ಲಿ ಸಂಪೂರ್ಣ ಬಂದ್‌ಗೆ ಆದೇಶ ಹೊರಡಿಸಿದ ಇಸ್ರೇಲಿನ ರಕ್ಷಣಾ ಸಚಿವ

0
98

ಟೆಲ್‌ ಅವಿವ್‌: ‘ನಾವು ಗಾಜಾವನ್ನು ಸಂಪೂರ್ಣ ಸೀಜ್‌ ಮಾಡಿದ್ದೇವೆ. ಇಲ್ಲಿ ವಿದ್ಯುತ್ ಇಲ್ಲ, ಆಹಾರವಿಲ್ಲ, ನೀರಿಲ್ಲ, ಗೃಹ ಅಥವಾ ವಾಣಿಜ್ಯ ಬಳಕೆ ಅನಿಲ ಪೂರೈಕೆ ಇರುವುದಿಲ್ಲ. ಎಲ್ಲವನ್ನೂ ಸ್ಥಗಿತಗೊಳಿಸಲಾಗಿದೆ’ ಎಂದು ಇಸ್ರೇಲಿನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಹಮಾಸ್‌ ಭಯೋತ್ಪಾದಕರು ಶನಿವಾರ ಇಸ್ರೇಲ್‌ನ ಗಡಿಯುದ್ದಕ್ಕೂ ದಾಳಿ ನಡೆಸಿದರು. ಪರಿಣಾಮವಾಗಿ ದಕ್ಷಿಣ ಇಸ್ರೇಲ್‌ನಲ್ಲಿ 700 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಗಾಜಾದ ಸಮೀಪವಿರುವ ಸಮುದಾಯಗಳು ಮತ್ತು ಪಟ್ಟಣಗಳಲ್ಲಿನ ಜನರನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲಿ ಭದ್ರತಾ ಪಡೆಗಳು ಹೋರಾಟ ನಡೆಸುತ್ತಿವೆ.

LEAVE A REPLY

Please enter your comment!
Please enter your name here