
ಪುತ್ತೂರು : ಕಟ್ಟಡ ವಿಚಾರವೊಂದಕ್ಕೆ ಹದಿನೈದು ದಿನಗಳ ಹಿಂದೆ ಹಿಂದೂ ಪರ ಸಂಘಟನೆಗೆ ಸೇರಿದ ಯುವಕರು ಆ ಕಟ್ಟಡಕ್ಕೆ ನುಗ್ಗಿ ಅಲ್ಲಿದ್ದ ಹಿಂದೂಗಳಿಗೆ ಹಲ್ಲೆ ನಡೆಸಿದ ಹಾಗೂ ಹಲ್ಲೆಗೊಳಗಾದವರನ್ನು ಸ್ಥಳೀಯ ಮುಸ್ಲಿಂ ಯುವಕರು ರಕ್ಷಿಸಲು ಮುಂದಾದ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ. ಈ ಘಟನೆ ಸೆ.23 ರಂದು ಉಪ್ಪಿನಂಗಡಿಯಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.ಇದೀಗ ಈ ಕುರಿತು ವೀಡಿಯೋ ವೈರಲ್ ಆಗುತ್ತಿದೆ.

ಪ್ರಕರಣದ ವಿವರ : ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಾಂಗಟು ಪಾಸ್ವಾನ್(35) ಎಂಬಾತ ಸೆ.24 ರಂದು ದೂರು ನೀಡಿದ್ದು, ತಾನು 34 ನೆಕ್ಕಿಲಾಡಿಯ ಜಗಜ್ಜೀವನ್ ರೈ ಅವರ ಮನೆಯಲ್ಲಿ ಕೂಲಿ ಕೆಲಸ ಮಡಿಕೊಂಡಿದ್ದು,ಸೆ.23 ರಂದು ಉಪ್ಪಿನಂಗಡಿಯ ಬಸ್ ನಿಲ್ದಾಣದ ಬಳಿ ನನ್ನ ಧಣಿಯವರಿಗೆ ಸೇರಿದ ಹಳೆಯ ಕಟ್ಟಡದ ದುರಸ್ತಿ ಮಾಡಿತ್ತಿದ್ದ ಸಂದರ್ಭ ಮಧ್ಯಾಹ್ನ 3-10 ರ ಸುಮಾರಿಗೆ ಆರೋಪಿಗಳಾದ ಉಪ್ಪಿನಂಗಡಿ ನಿವಾಸಿ ಸುದರ್ಶನ ಹಾಗೂ 10-15 ಮಂದಿಯ ತಂಡ ಅಕ್ರಮ ಕೂಟ ಸೇರಿಕೊಂಡು ನನ್ನ ಧಣಿಯವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ನನ್ನನ್ನು ಉದ್ದೇಶಿಸಿ ಇಲ್ಲಿಂದ ಎಲ್ಲರೂ ಹೋಗಿ ಎಂದು ಹೇಳಿದ್ದಲ್ಲದೆ,ಕಾಲಿನ ಚಪ್ಪಲಿಯಿಂದ ನನಗೆ ಹಲ್ಲೆ ನಡೆಸಿದ್ದಾರೆ.

ಬಿಡಿಸಲು ಬಂದ ನನ್ನ ಧಣಿ ಜಗಜ್ಜೀವನ್ ರೈ ಯವರಿಗೆ 10-13 ಮಂದಿ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ.ನನ್ನ ಧಣಿಯವರು ಹಾಗೂ ಆರೋಪಿ ಸುದರ್ಶನ್‌ಗೂ ಜಾಗದ ಕಟ್ಟಡದ ವಿಚಾರದಲ್ಲಿ ತಕರಾರು ಇದ್ದು, ಧಣಿಯವರು ಕಟ್ಟಡದ ದುರಸ್ತಿ ಕೆಲಸವನ್ನು ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಈ ಕೃತ್ಯವೆಸಗಿದ್ದಾರೆ’