ಹ್ಯಾಂಗ್‌ಝೂ: ಏಷ್ಯನ್ ಗೇಮ್ಸ್ ನಲ್ಲಿ ಭಾರತ ಮತ್ತೊಂದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. 25 ಮೀ. ಸ್ಪರ್ಧೆಯಲ್ಲಿ ಮಹಿಳೆಯರ ಪಿಸ್ತೂಲ್ ತಂಡ ಸ್ವರ್ಣ ಪದಕವನ್ನು ಗೆದ್ದುಕೊಂಡಿದೆ.
ಬುಧವಾರ(ಸೆ.27 ರಂದು) ನಡೆದ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್, ಎಸ್ ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಅವರು ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಆ ಮೂಲಕ ಭಾರತದ ಏಷ್ಯನ್ ಗೇಮ್ಸ್ ಪದಕ ಬೇಟೆಯನ್ನು ಮುಂದುವರಿಸಿದ್ದಾರೆ.
ಭಾರತ ಒಟ್ಟು 1759 ಅಂಕಗಳನ್ನು ಗಳಿಸುವ ಮೂಲಕ ಪ್ರಬಲ ಸ್ಪರ್ಧಿ ಚೀನಾಕ್ಕೆ ಆಘಾತವನ್ನೀಡಿದೆ. ಬೆಳ್ಳಪಡೆದುಕೊಂಡ ಚೀನಾ ಒಟ್ಟು 1756 ಅಂಕಗಳನ್ನು ಗಳಿಸಿತು. ಇನ್ನು ರಿಪ್ಲಬಿಕ್ ಆಫ್ ಕೊರಿಯಾ 1742 ಅಂಕಗಳೊಂದಿಗೆ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.
ಏಷನ್ಸ್ ಗೇಮ್ಸ್ ನಲ್ಲಿ ಭಾರತ ಇದುವರೆಗೆ 16 ಪದಕಗಳನ್ನು ಗಳಿಸಿದ್ದು, ಇದರಲ್ಲಿ 4 ಚಿನ್ನ, 5 ಬೆಳ್ಳಿ ಹಾಗೂ 7 ಕಂಚಿನ ಪದಕಗಳು ಸೇರಿವೆ.