ಕರಾವಳಿ ನಟಿ ಕೃತಿ ಶೆಟ್ಟಿ ತೆಲುಗಿನಲ್ಲಿ ಮಿಂಚಿದ ಬಳಿಕ ಮಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಮಲಯಾಳಂ ಸಿನಿಮಾದಲ್ಲಿ ಕೃತಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಉಪ್ಪೇನ ಸುಂದರಿ ಕೃತಿ ಶೆಟ್ಟಿ, ಮಾಲಿವುಡ್ ನಟ ಟೊವೀನೋ ಥಾಮಸ್‌ಗೆ ಜೊತೆಯಾಗುತ್ತಿದ್ದಾರೆ. ಈ ಬಗ್ಗೆ ಸ್ವತಃ ನಟ ಟೊವೀನೋ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಕೃತಿ ಅವರನ್ನು ಲಕ್ಷ್ಮಿಯಾಗಿ ಪರಿಚಯಿಸುತ್ತಿದ್ದೇವೆ ಎಂದಿದ್ದಾರೆ. ಜೊತೆಗೆ ಚಿತ್ರದಲ್ಲಿನ ನಾಯಕಿಯ ಫಸ್ಟ್ ಲುಕ್ ಕೂಡ ರಿವೀಲ್ ಮಾಡಿದ್ದಾರೆ. ಚಿತ್ರಕ್ಕೆ ‘ಎಆರ್‌ಎಂ’ ಎಂದು ಟೈಟಲ್ ಇಡಲಾಗಿದೆ.
ವಿಭಿನ್ನ ಪ್ರೇಮಕತೆಯಲ್ಲಿ ಲಕ್ಷ್ಮಿಯಾಗಿ ಕೃತಿ ಶೆಟ್ಟಿ ಕಾಣಿಸಿಕೊಳ್ತಿದ್ದಾರೆ. ಮಲೆಯಾಳಿ ಹುಡುಗಿಯಂತೆ ಕಾಣಿಸಿಕೊಂಡು, ಕಿವಿಗೆ ಝಮುಕಿಗಳನ್ನು ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮಾಲಿವುಡ್ ಚಿತ್ರರಂಗಕ್ಕೆ ಕೃತಿ ಎಂಟ್ರಿ ಕೊಡ್ತಿದ್ದಾರೆ. ಮೊದಲ ಬಾರಿಗೆ ಟೊವೀನೋ ಥಾಮಸ್ ಜೊತೆ ಕಾಣಿಸಿಕೊಳ್ತಿರೋದ್ರಿಂದ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆ.