‘ಬಹಳ ಜನ ನನ್ನನ್ನು 2ನೇ ದೇವರಾಜ ಅರಸು ಅಂತಾರೆ’- ಸಿಎಂ

0
96

ಬೆಂಗಳೂರು, ಸೆ. 18: ನನ್ನನ್ನ ಎಲ್ಲರೂ 2ನೇ ದೇವರಾಜ ಅರಸು ಅಂತಾರೆ. ಆದ್ರೆ ನಾನು ದೇವರಾಜ ಅರಸು ಆಗೋದಕ್ಕೆ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಾಜ ಅರಸು ಕಾರಿನಲ್ಲಿ ಓಡಾದಿದಾ ಕ್ಷಣ ಅರಸು ಆಗೋದಕ್ಕೆ ಸಾಧ್ಯವಿಲ್ಲ ಎಂಬ ವಿಧಾನಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್ ಅವರ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಬಹಳ ಜನ ನನ್ನನ್ನ ದೇವರಾಜ ಅರಸು ನಂತರ ಸಾಮಾಜಿಕ ಹರಿಕಾರರು ಅಂತಾರೆ. 2ನೇ ದೇವರಾಜ ಅರಸು ಅಂತಾರೆ. ಆದ್ರೆ, ದೇವರಾಜ ಅರಸು ದೇವರಾಜ ಅರಸರೇ ಸಿದ್ದರಾಮಯ್ಯ ಸಿದ್ದರಾಮಯ್ಯನೇ. ನಾನು ದೇವರಾಜ ಅರಸು ಆಗೋದಕ್ಕೆ ಸಾಧ್ಯವಿಲ್ಲ. ಭಾಷಣದ ಮಾತಿಗಿಂತ ಯಾರಲ್ಲಿ ಬದ್ಧತೆ-ಕಾಳಜಿ ಇದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ ಎಂದು ಹೇಳಿದ್ದಾರೆ.ನಾವು ರೂಪಿಸುವ ಕಾಳಜಿ ಮತ್ತು ಕಾರ್ಯಕ್ರಮಗಳಲ್ಲಿ ಸಾಮಾಜಿಕ ನ್ಯಾಯ ಇರುತ್ತದೆ ಅಷ್ಟೇ ಎಂದಿದ್ದಾರೆ.

LEAVE A REPLY

Please enter your comment!
Please enter your name here