ಮುಂದಿನ ವರ್ಷ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲು ಬಿಡುಗಡೆ

0
129

ನವದೆಹಲಿ: ವಂದೇ ಭಾರತ್‌ ಸ್ಲೀಪರ್‌ ಕೋಚ್‌ ಮತ್ತು ವಂದೇ ಮೆಟ್ರೋ ರೈಲು ಮುಂದಿನ ವರ್ಷ ಬಿಡುಗಡೆಯಾಗಲಿದೆ.

2024ರ ಮಾರ್ಚ್‌ ಒಳಗಡೆ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿ (ICF) ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲನ್ನು ಬಿಡುಗಡೆ ಮಾಡಲಿದೆ. ಮೊದಲ ರೈಲಿನ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದು ಎಂದು ಐಸಿಎಫ್‌ ಜನರಲ್‌ ಮ್ಯಾನೇಜರ್‌ ಬಿಜಿ ಮಲ್ಯ ತಿಳಿಸಿದ್ದಾರೆ.

ಸ್ಲೀಪರ್‌ ಕೋಚ್‌ ಜೊತೆಗೆ ಕಡಿಮೆ ದರ ಇರುವ ವಂದೇ ಮೆಟ್ರೋ ರೈಲನ್ನು ಐಸಿಎಫ್‌ ನಿರ್ಮಾಣ ಮಾಡುತ್ತಿದೆ. 12 ಬೋಗಿಗಳು ಇರುವ ವಂದೇ ಮೆಟ್ರೋ ಕಡಿಮೆ ದೂರದ ನಗರಗಳನ್ನು ಸಂಪರ್ಕಿಸಲಿದೆ. ಜನವರಿ 2024ರ ಒಳಗಡೆ ವಂದೇ ಮೆಟ್ರೋ ಬಿಡುಗಡೆಯಾಗುವ ನಿರೀಕ್ಷೆಯಿದೆ.

ರಾತ್ರಿ ವೇಳೆ ವಂದೇ ಭಾರತ್‌ ರೈಲನ್ನು ಓಡಿಸಬೇಕು ಎಂಬ ಬೇಡಿಕೆ ಪ್ರಯಾಣಿಕರ ಕಡೆಯಿಂದ ಬಂದಿದ್ದರೂ ಸದ್ಯ ಸ್ಲೀಪರ್‌ ಕೋಚ್‌ ಇಲ್ಲದ ಕಾರಣ ರೈಲ್ವೇ ವಂದೇ ಭಾರತ್‌ ರೈಲನ್ನು ಓಡಿಸುತ್ತಿಲ್ಲ. ಈ ಕಾರಣಕ್ಕೆ ರಾತ್ರಿಯ ಸಂಚಾರ ಸುಗಮವಾಗಲೆಂದು ರೈಲ್ವೇ ಈಗ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ನಿರ್ಮಾಣ ಮಾಡುತ್ತಿದೆ.

LEAVE A REPLY

Please enter your comment!
Please enter your name here