ಹೊಸ ಪ್ರತಿಭೆಗಳ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಥಿಯೇಟರ್ ನಲ್ಲಿ ಕಮಾಲ್ ಮಾಡಿತ್ತು. ಕಳೆದ ಜುಲೈ 21ರಂದು ಬಿಡುಗಡೆಯಾಗಿದ್ದ ಚಿತ್ರಕ್ಕೆ ಭರಪೂರ ಮೆಚ್ಚುಗೆ ಸಿಕ್ಕಿತ್ತು. ನಕ್ಕು ನಲಿಸಿದ್ದ ತುಂಗಾ ಹಾಸ್ಟೆಲ್ ಬಾಯ್ಸ್ ಒಟಿಟಿಯಲ್ಲಿ ಹವಾಳಿ ಶುರು ಮಾಡಿಕೊಂಡಿದ್ದಾರೆ. ಅಂದರೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಜೀ5 ಒಟಿಟಿಗೆ ಎಂಟ್ರಿ ಕೊಟ್ಟಿದೆ.
ನಿತಿನ್ ಕೃಷ್ಣಮೂರ್ತಿ ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ಇಡೀ ಸ್ಯಾಂಡಲ್ ವುಡ್ ಸಪೋರ್ಟ್ ಕೊಟ್ಟಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫಸ್ಟ್ ಲುಕ್ ಪೋಸ್ಟರ್ ಗೆ ಚಾಲನೆ ನೀಡಿದ್ದರು. ರಿಷಬ್ ಶೆಟ್ಟಿ, ಶೈನ್ ಶೆಟ್ಟಿ, ಪವನ್ ಕುಮಾರ್ ಹಾಗೂ ರಮ್ಯಾ ಗೆಸ್ಟ್ ಅಪಿಯರೆನ್ಸ್ ನಲ್ಲಿ ಕಾಣಿಸಿಕೊಂಡಿದ್ದರು. ಇಡೀ ಚಿತ್ರರಂಗ ಬೆಂಬಲ ಕೊಟ್ಟಿದ್ದ ತುಂಗಾ ಹಾಸ್ಟೆಲ್ ಬಾಯ್ಸ್ ಬೆಳ್ಳಿತೆರೆಯಲ್ಲಿ ಧಮಾಕ ಎಬ್ಬಿಸಿದ್ದರು. ಸಿನಿರಸಿಕರನ್ನು ಸಿನಿಮಾ ಥಿಯೇಟರ್ ನತ್ತ ಮುಖ ಮಾಡುವಂತೆ ಮಾಡಿ ಚಪ್ಪಾಳೆ ಪಡೆದಿದ್ದ ಈ ಸಿನಿಮಾ ತೆಲುಗು, ಹೊರ ದೇಶದಲ್ಲಿಯೂ ಭಾರೀ ರೆಸ್ಪಾನ್ಸ್ ಪಡೆದುಕೊಂಡಿತ್ತು.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಕಿರುಚಿತ್ರ ನಿರ್ದೇಶಿಸಲು ವಾರ್ಡನ್ ಸಪೋರ್ಟ್ ಕೊಟ್ಟಿದ್ದರು. ಸಿನಿಮಾ ಒಳಗೊಂದು ಕಿರುಚಿತ್ರ ಕಥೆ ಹೆಣೆಯಲಾಗಿತ್ತು. ಇದೀಗ ಜೀ5 ಅತ್ಯುತ್ತಮ ಕಿರುಚಿತ್ರ ನಿರ್ದೇಶಿಸಿದರಿಗೆ ಆಫರ್ ವೊಂದನ್ನು ಕೊಟ್ಟಿದೆ. ಶಾರ್ಟ್ ಫಿಲ್ಮಂ ಕಂಟೆಸ್ಟ್ ಚಾನ್ಸ್ ನೀಡಿದ್ದು, ಇದರಲ್ಲಿ ಅತ್ಯುತ್ತಮ ಎನಿಸಿದ್ದನ್ನು ಜೀ5 ಒಟಿಟಿಯಲ್ಲಿ ಪ್ರಸಾರ ಮಾಡಲಾಗುತ್ತದೆ.