ಆಕರ್ಷಕ ಬೆಲೆಗೆ 2023ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ

By: Ommnews

Date:

Share post:

ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿ ಹೊಸ ನೆಕ್ಸಾನ್ ಇವಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.74 ಲಕ್ಷದಿಂದ ಟಾಪ್ ಎಂಡ್ ವೆರಿಯೆಂಟ್ ರೂ. 19.94 ಲಕ್ಷ ಬೆಲೆ ಹೊಂದಿದೆ.

Advertisement
Advertisement
Advertisement

ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್

ನೆಕ್ಸಾನ್ ಇವಿ ಹೊಸ ಕಾರಿನ ಲಾಂಗ್ ರೇಂಜ್ ವೆರಿಯೆಂಟ್ ಗಳು 40.5 ಕೆವಿಹೆಚ್ ಬ್ಯಾಟರಿ ಪ್ಯಾಕ್‌ ಜೋಡಣೆ ಹೊಂದಿದ್ದು, ಮಿಡ್ ರೇಂಜ್ ವೆರಿಯೆಂಟ್ ಗಳಲ್ಲಿ 30 ಕೆವಿಹೆಚ್ ಬ್ಯಾಟರಿ ಪ್ಯಾಕ್‌ ಜೋಡಣೆ ಮಾಡಲಾಗಿದೆ. ಇದರಲ್ಲಿ ಲಾಂಗ್ ರೇಂಜ್ ವೆರಿಯೆಂಟ್ ಗಳು ಪ್ರತಿ ಚಾರ್ಜ್ ಗೆ ಗರಿಷ್ಠ 465 ಕಿ.ಮೀ ಮೈಲೇಜ್ ನೀಡಲಿದ್ದು, ಇದು 142 ಹಾರ್ಸ್ ಪವರ್ ಮತ್ತು 215 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಮಿಡ್ ರೇಂಜ್ ವೆರಿಯೆಂಟ್ ಗಳು ಪ್ರತಿ ಚಾರ್ಜ್ ಗೆ 325 ಕಿ.ಮೀ ಮೈಲೇಜ್ ನೀಡಲಿದ್ದು, ಇವು 127 ಹಾರ್ಸ್ ಪವರ್ ಮತ್ತು 215 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತವೆ. ಈ ಮೂಲಕ ಹೊಸ ಇವಿ ಕಾರು ಈ ಹಿಂದಿನ ಮಾದರಿಗಿಂತಲೂ ಹೆಚ್ಚುವರಿಯಾಗಿ 12 ಕಿ.ಮೀ ಮೈಲೇಜ್ ನೀಡುವುದರ ಜೊತೆಗೆ ಪರ್ಫಾಮೆನ್ಸ್ ನಲ್ಲೂ ಕೂಡಾ ಸಾಕಷ್ಟು ಸುಧಾರಿಸಿದೆ.

ಹೊಸ ನೆಕ್ಸಾನ್ ಇವಿ ಕಾರಿನಲ್ಲಿ ಟಾಟಾ ಕಂಪನಿ ಈ ಬಾರಿ ಕಂಪ್ಯಾಕ್ಟ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಇದು ಹಳೆಯ ಮಾದರಿಗಿಂತಲೂ ಸುಮಾರು 20 ಕೆಜಿಯಷ್ಟು ಹಗುರವಾಗಿರುವುದರಿಂದ ಹೆಚ್ಚುವರಿ ಮೈಲೇಜ್ ಮತ್ತು ಪರ್ಫಾಮೆನ್ಸ್ ಸುಧಾರಣೆಗೆ ಸಹಕಾರಿಯಾಗಿದೆ. ಹಾಗೆಯೇ ಹೊಸ ನೆಕ್ಸಾನ್ ಇವಿ ಕಾರಿನಲ್ಲಿ V2V ಮತ್ತು V2L ಚಾರ್ಜಿಂಗ್ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು, ಹೊಸ ತಂತ್ರಜ್ಞಾನದೊಂದಿಗೆ ನೆಕ್ಸಾನ್ ಕಾರು ಮಾಲೀಕರು ಇತರೆ ನೆಕ್ಸಾನ ಇವಿ ಕಾರುಗಳಿಂದ ಬ್ಯಾಟರಿ ರೀಚಾರ್ಜ್ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಇದು ತುರ್ತು ಸಂದರ್ಭದಲ್ಲಿ ಚಾರ್ಜರ್ ಸಮಸ್ಯೆ ಬಗೆಹರಿಸಲು ಸಹಕಾರಿಯಾಗಿದ್ದು, ಇಕೋ, ಸಿಟಿ ಮತ್ತು ಸ್ಪೋರ್ಟ್ ಡ್ರೈವಿಂಗ್ ಮೋಡ್ ಗಳು ಚಾಲನಾ ಆದ್ಯತೆಗೆ ಸಹಕಾರಿಯಾಗಿವೆ.

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಟಾಟಾ ಮೋಟಾರ್ಸ್ ಕಂಪನಿ ಹೊಸ ನೆಕ್ಸಾನ್ ಇವಿ ಮಾದರಿಯಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳ ಜೊತೆಗೆ ವಿನ್ಯಾಸ ಮತ್ತು ವೈಶಿಷ್ಟ್ಯತೆಯಲ್ಲೂ ಗಮರ್ನಾಹ ಬದಲಾವಣೆ ತಂದಿದೆ. ಹೊಸ ನೆಕ್ಸಾನ್ ಇವಿ ಸಾಮಾನ್ಯ ನೆಕ್ಸಾನ್ ಮಾದರಿಯಲ್ಲಿರುವಂತೆ ಫ್ರಂಟ್ ಡಿಸೈನ್ ಜೊತೆಗೆ ಕರ್ವ್ ಕಾನ್ಸೆಪ್ಟ್ ಮಾದರಿಯ ವಿನ್ಯಾಸದಿಂದಲೂ ತುಸು ಪ್ರೇರಣೆ ಪಡೆದುಕೊಂಡಿದೆ. ಹೀಗಾಗಿ ಹೊಸ ಕಾರಿನ ಏರೋ ಡೈನಾಮಿಕ್ ವಿನ್ಯಾಸವು ಮತ್ತಷ್ಟು ಸ್ಪೋರ್ಟಿ ಲುಕ್ ನೀಡಲಿದ್ದು, ಇದರಲ್ಲಿ ಎಲ್ಇಡಿ ಹೆಡ್ ಲೈಟ್ಸ್, ಫಂಕ್ಷನಲ್ ಏರ್ ವೆಂಟ್ಸ್ ಹೊಂದಿರುವ ಫ್ರಂಟ್ ಗ್ರಿಲ್, ಫ್ಲಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್ ಮತ್ತು ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಜೋಡಿಸಲಾಗಿದೆ.

ಹೊಸ ನೆಕ್ಸಾನ್ ಇವಿ ಮಾದರಿಯು ಹೊರಭಾಗದಲ್ಲಿರುವಂತೆ ಒಳಭಾಗದಲ್ಲೂ ಹಲವಾರು ಬದಲಾವಣೆಗಳನ್ನು ಮಾಡಲಾಗಿದ್ದು, ಆಕರ್ಷಕವಾದ ಪಿಯಾನೋ ಬ್ಲ್ಯಾಕ್ ಡ್ಯಾಶ್ ಬೋರ್ಡ್ ನೊಂದಿಗೆ ಟು ಸ್ಪೋಕ್ ಸ್ಟೀರಿಂಗ್ ವ್ಹೀಲ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕನೆಕ್ಟಿವಿಟಿ ಹೊಂದಿರುವ 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಸಿ ಟೈಪ್ ವೈರ್‌ಲೆಸ್ ಮೊಬೈಲ್ ಚಾರ್ಜರ್, ನ್ಯಾವಿಗೇಷನ್ ಹೊಂದಿರುವ 10.25 ಇಂಚಿನ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಸಿಂಗಲ್ ಪೇನ್ ಸನ್ ರೂಫ್, 360 ಡಿಗ್ರಿ ಕ್ಯಾಮೆರಾ, ವಾಯ್ಸ್ ಕಮಾಂಡ್ ಮತ್ತು ಜೆಬಿಎಲ್ ಸೌಂಡ್ ಸಿಸ್ಟಂ ಸೌಲಭ್ಯ ಹೊಂದಿದೆ.

ಸುರಕ್ಷಾ ಸೌಲಭ್ಯಗಳು

ಹೊಸ ನೆಕ್ಸಾನ್ ಇವಿ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇದರಲ್ಲಿ ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಸ್ಟ್ಯಾಂಡರ್ಡ್ ಆಗಿ ಆರು ಏರ್ ಬ್ಯಾಗ್ ಗಳು, ಎಬಿಎಸ್ ಜೊತೆ ಇಎಸ್ ಸಿ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಬ್ಲೈಂಡ್ ವ್ಯೂ ಮಾನಿಟರ್, ಎಲ್ಲಾ ಆಸನಗಳಲ್ಲೂ ತ್ರಿ ಪಾಯಿಂಟ್ ಸೀಟ್ ಬೆಲ್ಟ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಡಿಸ್ಕೆಂಟ್, ಪ್ಯಾನಿಕ್ ಬ್ರೇಕ್ ಮತ್ತು ಬ್ರೇಕ್ ಡೌನ್ ಸಮಸ್ಯೆಗಾಗಿ ಎಮರ್ಜೆನ್ಸಿ ಅಸಿಸ್ಟ್ ಸೌಲಭ್ಯವನ್ನು ನೀಡಲಾಗಿದೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section