ಇದೆ ತಿಂಗಳ 24ನೇ ತಾರೀಖು ಆದಿತ್ಯವಾರದಂದು ಪರಮಹಂಸದಲ್ಲಿ ಬೆಂಗಳೂರು ರಾಮಕೃಷ್ಣ ಮಠದ ಪೂಜ್ಯ ಸ್ವಾಮಿ ಮಂಗಳನಾಥಾನಂದಜೀ ಮಹರಾಜ್ ಅವರ ಉಪಸ್ಥಿತಿಯಲ್ಲಿ ಸಾಯಂಕಾಲ 7 ಗಂಟೆಯಿಂದ 9 ಗಂಟೆಯ ತನಕ ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

0
139

ಪರಮಹಂಸ ಕೆದಿಲ

ಆತ್ಮೀಯರೇ, ಇದೇ ಸಪ್ಟೆಂಬರ್ ತಿಂಗಳ 24ನೇ ತಾರೀಖು ಆದಿತ್ಯವಾರದಂದು ನಮ್ಮ ಮನೆ ಪರಮಹಂಸದಲ್ಲಿ ಬೆಂಗಳೂರು ರಾಮಕೃಷ್ಣ ಮಠದ ಪೂಜ್ಯ ಸ್ವಾಮಿ ಮಂಗಳನಾಥಾನಂದಜೀ ಮಹರಾಜ್ ಅವರ ಉಪಸ್ಥಿತಿಯಲ್ಲಿ ಸಾಯಂಕಾಲ 7 ಗಂಟೆಯಿಂದ 9 ಗಂಟೆಯ ತನಕ ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.1893ನೇ ಇಸವಿ ಸಪ್ಟೆಂಬರ್ ತಿಂಗಳ 11 ರಿಂದ 27 ತಾರೀಖಿನ ತನಕ ಅಮೆರಿಕದಲ್ಲಿ ನಡೆದ ವಿಶ್ವಧರ್ಮಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಕೊಟ್ಟ ಅದ್ಭುತ ಉಪನ್ಯಾಸಗಳಿಗೆ ಜಗತ್ತಿನ ಮಹಾಮೇಧಾವಿಗಳು,ವಿದ್ವತ್ಪೂರ್ಣ ಗಣ್ಯರೆಲ್ಲ ಮನಸೋತಿದ್ದರು.ಭಾರತದ ಇತಿಹಾಸದಲ್ಲಿ ಈ ಘಟನೆಯು ಅಜರಾಮರವಾಗಿದೆ.ಹಾಗಾಗಿ ಈ ಸಪ್ಟೆಂಬರ್ ತಿಂಗಳ ನಮ್ಮ ‘ಪರಮಹಂಸ’ದ ಸತ್ಸಂಗದಲ್ಲಿ ಚಿಕಾಗೋದಲ್ಲಿ ವಿಶ್ವಪತಾಕೆ ಎಂಬ ವಿಷಯದಲ್ಲಿ ಪೂಜ್ಯ ಸ್ವಾಮೀಜಿಯವರು ಪ್ರವಚನವನ್ನು ಕೊಡುತ್ತಾರೆ.ಈ ಸಂದರ್ಭದಲ್ಲಿ ನಮ್ಮ ಮನೆಯ ಆರ್ಕಿಟೆಕ್ಚರ್ ಕೂಡ ಆಗಿರುವ ಹಾಡುಗಾರ ಈಶ್ವರ ಸಂದೇಶ ಶಾಸ್ತ್ರೀ ನಡೆಸಿಕೊಡುವ ಗಾನಾರ್ಚನೆ ಕಾರ್ಯಕ್ರಮವೂ ನಡೆಯಲಿದೆ. ಶ್ರದ್ಧಾಭಕ್ತಿಯಿಂದ ಭಗವಂತನನ್ನು ನಂಬುವ ಆಸ್ತಿಕ ಭಕ್ತರಾದ ನಿಮಗಿದು ಪ್ರೀತಿಯ ಆಮಂತ್ರಣ. ಸಮಯಕ್ಕೆ ಮೊದಲೇ ಬನ್ನಿ ದಯವಿಟ್ಟು 🙏.ಕಾರ್ಯಕ್ರಮವು ಸರಿಯಾದ ಸಮಯಕ್ಕೆ ಆರಂಭಗೊಂಡು ಸರಿಯಾದ ಸಮಯಕ್ಕೆ ಮುಕ್ತಾಯಗೊಳ್ಳುತ್ತದೆ.

ಶ್ರೀಕೃಷ್ಣ ಉಪಾಧ್ಯಾಯ ಮತ್ತು ಮನೆಯವರು, ಪರಮಹಂಸ-ಕೆದಿಲ

LEAVE A REPLY

Please enter your comment!
Please enter your name here