ಅಲ್ಪಸಂಖ್ಯಾತರ ಹಾಸ್ಟೆಲ್ ಗೆ ಸಚಿವ ಜಮೀರ್ ಅಹಮದ್ ದಿಢೀರ್ ಭೇಟಿ..ಅವ್ಯವಸ್ಥೆಗೆ ಅಧಿಕಾರಿ ಸಸ್ಪೆಂಡ್

0
129

ಮಂಗಳೂರು : ಅಲ್ಪಸಂಖ್ಯಾತರ ಹಾಸ್ಟೆಲ್ ಒಂದಕ್ಕೆ ಸಚಿವ ಜಮೀರ್ ಅಹಮದ್ ಖಾನ್ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂದು ಕೆಂಡಾಮಂಡಲವಾದ ಘಟನೆ ವೆಲೆನ್ಸಿಯಾ ರಸ್ತೆಯ ಅಲ್ಪಸಂಖ್ಯಾತರ ಮೆಟ್ರಿಕ್‌ ಅನಂತರದ ಬಾಲಕರ ಹಾಸ್ಟೆಲ್‌ ನಲ್ಲಿ ನಡೆದಿದೆ.

ಜಿಲ್ಲೆಯ ಪ್ರವಾಸದಲ್ಲಿರುವ ಸಚಿವ ಜಮೀರ್ ಅಹ್ಮದ್ ವೆಲೆನ್ಸಿಯಾ ರಸ್ತೆಯ ಅಲ್ಪಸಂಖ್ಯಾತರ ಮೆಟ್ರಿಕ್‌ ಅನಂತರದ ಬಾಲಕರ ಹಾಸ್ಟೆಲ್‌ ಗೆ ಅನಿರೀಕ್ಷಿತ ಭೇಟಿ ನೀಡಿದ್ದರು.

ಈ ವೇಳೆ ಹಾಸ್ಟೆಲ್‌ನಲ್ಲಿ ಶುಚಿತ್ವ ಕಾಪಾಡದಿರುವುದು, ಶೌಚಾಲಯ ನಿರ್ವಹಣೆ ಸರಿ ಇಲ್ಲ ದಿರುವುದು ಕಂಡು ಬಂದಿದ್ದು,ಅಲ್ಲದೆ ಅಲ್ಲಿನ ವಿದ್ಯಾರ್ಥಿಗಳು ಗುಣಮಟ್ಟದ ಆಹಾರ ಕೊಡುತ್ತಿಲ್ಲ.

ವಾರಕ್ಕೊಮ್ಮೆ ಬದಲಿಗೆ 15 ದಿನಕ್ಕೆ ಕೋಳಿ ಮಾಂಸಾಹಾರ ನೀಡಲಾಗುತ್ತಿದೆ. ಚಾರ್ಟ್‌ ಪ್ರಕಾರ ಆಹಾರ ಪೊರೈಕೆ ಮಾಡುತ್ತಿಲ್ಲ ಎಂದು ದೂರಿದರು.

5 ವರ್ಷ ಆದರೂ ಬೆಡ್‌ ಶೀಟ್‌ ಕೊಟ್ಟಿಲ್ಲ, ತಲೆದಿಂಬು ಇಲ್ಲ, ನಮ್ಮ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಚಿವರ ಸಮ್ಮುಖದಲ್ಲಿ ಆರೋಪಿಸಿದರು.

ತತ್‌ಕ್ಷಣ ಸಚಿವರು ತಾಲೂಕು ವಿಸ್ತರಣೆ ಅಧಿಕಾರಿ ಮಂಜುನಾಥ್‌ ಅವರನ್ನು ಸ್ಥಳದಲ್ಲೇ ಅಮಾನತು ಮಾಡಿ ಎಂದು ಆದೇಶ ಹೊರಡಿಸಿದರು. ಡಿಎಂಒ ಜಿನೇಂದ್ರ ಹಾಗೂ ವಾರ್ಡನ್‌ ಅಶೋಕ್‌ಗೆ ಶೋಕಾಸ್‌ ನೋಟಿಸ್‌ ನೀಡಲು ಸೂಚಿಸಿದರು.

LEAVE A REPLY

Please enter your comment!
Please enter your name here