ಜಾಹೀರಾತಲ್ಲಿ ತೋರಿಸಿದ್ದಕ್ಕಿಂತ ಒಂದೇ ಒಂದು ಬಿಸ್ಕೆಟ್ ಕಡಿಮೆ: ಗ್ರಾಹಕನಿಗೆ 1ಲಕ್ಷ ಪರಿಹಾರ ನೀಡುವಂತೆ ಸೂಚಿಸಿದ ಕೋರ್ಟ್

0
87

ಸಾಮಾನ್ಯವಾಗಿ ಸಂಸ್ಥೆಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಮಾಧ್ಯಮಗಳಲ್ಲಿ ಭರ್ಜರಿ ಜಾಹೀರಾತುಗಳನ್ನು ನೀಡುತ್ತಾರೆ. ಕೆಲವೊಮ್ಮೆ ಇದರಲ್ಲಿ ಇರುವುದಕ್ಕಿಂತ ಉತ್ಪ್ರೇಕ್ಷೆ ಹೆಚ್ಚಿರುತ್ತದೆ. ಆದರೆ ಜನ ಸಾಮಾನ್ಯರು ಯಾರು ಇದರ ಬಗ್ಗೆ ಕೋರ್ಟ್ ಮೆಟ್ಟಿಲೇರುವುದು ತೀರಾ ಕಡಿಮೆ.

ಆದರೆ ಅಪರೂಪದ ಪ್ರಕರಣವೊಂದರಲ್ಲಿ ಗ್ರಾಹಕ ನ್ಯಾಯಾಲಯವೊಂದು ಜಾಹೀರಾತಿನಲ್ಲಿ ತೋರಿಸಿದ್ದಕ್ಕಿಂತ ಒಂದೇ ಒಂದು ಬಿಸ್ಕೆಟ್ ಪ್ಯಾಕೆಟ್‌ನಲ್ಲಿ ಕಡಿಮೆ ಇದ್ದಿದ್ದಕ್ಕೆ ಗ್ರಾಹಕನಿಗೆ ಬರೋಬ್ಬರಿ ಒಂದು ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.

ಚೆನ್ನೈ ಮೂಲದ ಪಿ ದಿಲ್ಲಿಬಾಬು ಎಂಬುವವರು ಬಿಸ್ಕೆಟ್ ಸಂಸ್ಥೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದವರು. ಇವರು ಐಟಿಸಿ ಲಿಮಿಟೆಡ್‌ಗೆ ಸೇರಿದ ಸನ್‌ಫಿಸ್ಟ್ ಮಾರಿ ಲೈಟ್ ಬಿಸ್ಕೆಟ್‌ ಪ್ಯಾಕೇಟೊಂದನ್ನು ಖರೀದಿ ಮಾಡಿದ್ದರು, ತಮ್ಮ ಮನೆ ಸುತ್ತ ವಾಸ ಮಾಡುವ ಬೀದಿ ನಾಯಿಗಳಿಗೆ ತಿನ್ನಿಸುವ ಸಲುವಾಗಿ ಅವರು ಬಿಸ್ಕೆಟ್ ಪ್ಯಾಕೇಟ್ ಖರೀದಿಸಿದ್ದು, ಇದರಲ್ಲಿ 15 ಬಿಸ್ಕೆಟ್‌ಗಳಿದ್ದವು. ಆದರೆ ಬಿಸ್ಕೆಟ್ ಹೊರಭಾಗದಲ್ಲಿರುವ ಲಕೋಟೆಯಲ್ಲಿ 16 ಬಿಸ್ಕೆಟ್ ಎಂದು ನಮೂದಿಸಲಾಗಿತ್ತು.

LEAVE A REPLY

Please enter your comment!
Please enter your name here