ಟೀಮ್ ಒಳಿತು ಮಾಡು ಮನುಷ ತಂಡದ 25 ನೇ ಕಾರ್ಯಕ್ರಮ, ಆರೋಗ್ಯ ಶಿಬಿರ,ಆಧಾರ್ ಕ್ಯಾಂಪ್,ರೂ 399ಕ್ಕೆ 10ಲಕ್ಷದ ವಿಮೆಯ ಶಿಬಿರ

By: Ommnews

Date:

Share post:

ಪುತ್ತೂರಿನ ಒಳಿತು ಮಾಡು ಮನುಷ ತಂಡದ 25ನೇ ಕಾರ್ಯಕ್ರಮ.
ಪುತ್ತೂರು ಇಲ್ಲಿನ ಟೀಮ್ ಒಳಿತು ಮಾಡು ಮನುಷ ತಂಡದ ಮುಂದಾಳತ್ವದಲ್ಲಿ ಜೆಸಿಐ ಪುತ್ತೂರು,ರೋಟರಿಕ್ಲಬ್ ಪುತ್ತೂರು ಎಲೈಟ್ ,ಪುತ್ತೂರು ಪೂರ್ವ,ಪುತ್ತೂರು ಸಿಟಿ,ಪುತ್ತೂರು ಸೆಂಟ್ರಲ್,ಪುತ್ತೂರು ಬೀರುಮಲೆ ಹಿಲ್, ಇನ್ನರ್ ವ್ಹಿಲ್ ಕ್ಲಬ್ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು,ಭಾರತೀಯ ರೆಡ್ ಕ್ರಾಸ್ ಸೊಸೈಟಿ ಪುತ್ತೂರು,ಪುತ್ತಿಲ ಪರಿವಾರ ಪುತ್ತೂರು, ಶ್ರೀ ಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್ ಪುತ್ತೂರು ಜಂಟಿ ಅಶ್ರಯದಲ್ಲಿ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ನೀಡುವ 25 ನೇ ಒಳಿತು ಮಾಡು ಮನುಷ ಯೋಜನೆ ಕಾರ್ಯಕ್ರಮ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಭಾಗಿತ್ವದಲ್ಲಿ
ಆಧಾರ್ ನೋಂದಣಿ ಮತ್ತು ಪರಿಷ್ಕರಣೆ ಹಾಗೂ
399/- ಕ್ಕೆ 10ಲಕ್ಷದ ಅಫಘಾತ ವಿಮೆಯ ಶಿಬಿರ, ಇದರೊಂದಿಗೆ
ಎ ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮಂಗಳೂರು ಇವರ ಸಹಬಾಗಿತ್ವದಲ್ಲಿ ಉಚಿತ ಅರೋಗ್ಯ ತಪಾಸಣೆ ಮತ್ತು ದಂತ ಚಿಕಿತ್ಸೆ ಶಿಬಿರ ಕಾರ್ಯಕ್ರಮವು ಅಗೋಸ್ಟ್ 30 ಬುಧವಾರದಂದು ಪುತ್ತೂರಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಪೂರ್ವ ಇದರ ಅಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ ಒಳಿತು ಮಾಡು ಮನುಷ ಟೀಮ್ 25 ತಿಂಗಳಿನಿಂದ 70 ಅಶಕ್ತ ಕುಟುಂಬಗಳಿಗೆ ಪ್ರತಿ ತಿಂಗಳು ಕಿಟ್ ಕೊಡುವ ಯೋಜನೆ ಹಾಕಿಕೊಂಡಿದ್ದಾರೆ.ರೋಟರಿ ಕ್ಲಬ್, ಲಯನ್ಸ್ ಕ್ಲಬ್ ,ಹಾಗೂ ಇನ್ನಿತರ ಬೇರೆ ಬೇರೆ ಸಂಸ್ಥೆಗಳಿಂದ ಸಹಕಾರ ಪಡೆದು ಕೊಂಡರೆ 100 ಜನ ಅಶಕ್ತರಿಗೆ ಕಿಟ್ ಕೊಡಬಹುದು.ರೋಟರಿ ಸಂಸ್ಥೆಯಿಂದ ಒಬ್ಬ ಫಲಾನುಭವಿಗೆ ಹಾಗೂ ನನ್ನ ವೈಯಕ್ತಿಕವಾಗಿ ಕೂಡ ಒಬ್ಬ ಫಲಾನುಭವಿಗೆ ಕಿಟ್ ಕೊಡುತ್ತೇನೆ. ನಿಮ್ಮ ಈ ಒಳ್ಳೆಯ ಕೆಲಸಕ್ಕೆ ನಿಮ್ಮೊಟ್ಟಿಗೆ ಸದಾ ನಾವಿದ್ದೇನೆ ಹಾಗೂ ಎಲ್ಲಾ ಸಂಸ್ಥೆಗಳು ನಿಮಗೆ ಸಹಕಾರ ನೀಡುತ್ತವೆ ಎಂದು ಹೇಳಿದರು.

Advertisement
Advertisement
Advertisement

ಲಯನ್ಸ್ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾದ ಟಿ ಸದಾಶಿವ ರವರು ಮಾತನಾಡಿ ಒಳಿತು ಮಾಡು ಮನುಷ ತಂಡ ಜಾತಿ ಮತ, ಭೇದವಿಲ್ಲದೆ ಎಲ್ಲರೂ ಸಮಾನರು ಎಂಬ ದೃಷ್ಟಿಯಲ್ಲಿ ಸ್ವಚ್ಚ ಮನಸ್ಸಿನಿಂದ ಮಾಡಿದ ಸೇವೆ ಅದು ದೇವರಿಗೆ ಸಲ್ಲುತ್ತದೆ. ಸರಕಾರದಿಂದ ಸಿಗುವ ಸೌಲಭ್ಯವನ್ನು ಹಾಗೂ ಆರೋಗ್ಯ ವಿಮೆಯ ಬಗ್ಗೆ ಜನಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಈ ತಂಡವು ಮಾಡುತ್ತಿದೆ. ಸಮಾಜದಲ್ಲಿ ಅಶಕ್ತ ಕುಟುಂಬಗಳಿಗೆ ಕೈ ಜೋಡಿಸುತ್ತಿರುವ ನಿಮಗೆ ಶುಭವಾಗಲಿ ಎಂದರು. ಪ್ರಸಾದ್ ಪೆರ್ಲoಪಾಡಿ
ಹಾಗೂ ರೋಟರಿ ಕ್ಲಬ್ ಪುತ್ತೂರು ಎಲೈಟ್ ಇದರ ಅಧ್ಯಕ್ಷರಾದ ಅಬ್ದುಲ್ ರಜಾಕ್ ಕಬಕಾಕರ್ಸ,ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ ಅಧ್ಯಕ್ಷರಾದ ಗ್ರೇಸಿ ಗೊನ್ಸಾಲ್ವಿಸ್ ,ಜೆಸಿಐ ನ ಅಧ್ಯಕ್ಷರಾದ ಸುಹಾಸ್ ಮರಿಕೆ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಭಾರತೀಯ ಅಂಚೆ ಇಲಾಖೆಯಾ ಗುರುಪ್ರಸಾದ್ ಇವರು 399/-ಕ್ಕೆ 10ಲಕ್ಷ ಅಪಘಾತ ವಿಮೆಯ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಪುತ್ತೂರು ವಲಯ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಜೇಸಿ ರಘು ಶೆಟ್ಟಿ ಇವರನ್ನು ಗೌರವಿಸಲಾಯಿತು
ಈ ಸಂದರ್ಭದಲ್ಲಿ ದಾನಿಗಳಾದ ಭವಾನಿ ನೂಜಿ,ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಶ್ರೀಮತಿ ಶೋಭಾ ಮಡಿವಾಳ ,ಸ್ಥಾಪಕಾಧ್ಯಕ್ಷರಾದ ಚೇತನ್ ಕುಮಾರ್,ಗೌರವಾಧ್ಯಕ್ಷರಾದ ಶರತ್ ಕುಮಾರ್,ಸಂಚಾಲಕರಾದ ಕೃಷ್ಣಪ್ಪ ಶಿವನಗರ,ಕಾರ್ಯದರ್ಶಿ ಮೋಹನ ಸಿಂಹವನ,ಸಂಘಟನಾಧ್ಯಕ್ಷರಾದ ಜಯರಾಜ್ ಅಮೀನ್,ಉಪಾಧ್ಯಕ್ಷರಾದ ವಿಜಯ ಕುಮಾರ್, ಶ್ರೀಮತಿ ಸರಸ್ವತಿ,ಸದಸ್ಯರಾದ ಶ್ರೀಮತಿ ಕಾವ್ಯ,ರಕ್ಷಾ, ಗಣ್ಯಶ್ರೀ,ಪುಣ್ಯಶ್ರೀ,ದೀಕ್ಷಾ, ಕೃಪಾ, ಶ್ರೀಮತಿ ಮನಿಷಾ, ಭವ್ಯ ಡಿಸೋಜ, ಅಕ್ಷಯ್ ಕುಲಾಲ್ ಉಪಸ್ಥಿತರಿದ್ದರು.ಪ್ರಾರ್ಥನೆಯನ್ನು ಸದಸ್ಯೆ ಕುಮಾರಿ ಆಶಾ ನೆರವೇರಿಸಿದರು,ಸ್ವಾಗತವನ್ನು ಖಜಾಂಚಿ ಶ್ರೀಮತಿ ಗೀತಾ,ಧನ್ಯವಾದವನ್ನು ಜೊತೆ ಕಾರ್ಯದರ್ಶಿ ಶ್ರೀಮತಿ ಶೃತಿಕಾ ನಿರ್ವಹಿಸಿದರು,ಭವತಿ ಭಿಕ್ಷo ದೇಹಿ ಬಡವರ ಬಂಧು ತಂಡದ ಸ್ಥಾಪಕಾಧ್ಯಕ್ಷರಾದ ಗುರುರಾಜ್ ಕುಕ್ಕಿಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section