ಪುತ್ತೂರು:ರೊಟರಿ ಕ್ಲಬ್ ಇಲೈಟ್ ವತಿಯಿಂದ ಆ.30.ರಂದು ಓಣಂ ಹಬ್ಬವನ್ನು ಆಚರಣೆ

By: Ommnews

Date:

Share post:

ಪುತ್ತೂರು:ರೊಟರಿ ಕ್ಲಬ್ ಇಲೈಟ್ ವತಿಯಿಂದ ಆ.30.ರಂದು ಓಣಂ ಹಬ್ಬವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ,”ಮಹಾಬಲಿ ರಾಜನ ಪ್ರಜೆಗಳ ಬಗ್ಗೆ ಉದಾತ್ತ ಗುಣದ ಫಲವಾಗಿ ತನ್ನ ಪ್ರಜೆಗಳನ್ನು ಪ್ರತೀ ವರ್ಷಕ್ಕೊಮ್ಮೆ ಭೇಟಿ ಮಾಡುವ ವರದಾನವು ವಿಷ್ಟಣು ದೇವನಿಂದ ಲಭಿಸುತ್ತದೆ. ಕೇರಳಿಗರು ತಮ್ಮ ಪ್ರೀತಿಪಾತ್ರ ಅರಸ ಮಹಾಬಲಿಯು ತಮ್ಮನ್ನು ಭೇಟಿ ಮಾಡಲು ಆಗಮಿಸುವ ಆ ಘಳಿಗೆಯನ್ನು ಓಣಂನ ಹೆಸರಿನಲ್ಲಿ ಸಂತೋಷದಿಂದ ಆಚರಿಸುತ್ತಾರೆ ಎಂದು ಆ ದಿನದ ಮಹತ್ವದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿದ್ದ ಬಿಲ್ಡರ್ ರೊ.ಜಾನ್ಸನ್ ಸಿ.ಯಂ.ರವರು ಹೇಳಿದರು. .ನಿ.ಪೂರ್ವ ಅಧ್ಯಕ್ಷ ರೊ.ಪೀಟರ್ ವಿ.ಪ್ರಭಾಕರ್ ಸಂದರ್ಭೋಚಿತವಾಗಿ ಮಾತನಾಡಿದರು.ಅಧ್ಯಕ್ಷ ರೊ.ರಝಾಕ್ ಕಬಕಕಾರ್ಸ್ ರವರು ಸ್ವಾಗತಿಸಿ ಇಲೈಟ್ ನ ಎಲ್ಲಾ ಸದಸ್ಯರಿಗೆ ಓಣಂ ಶುಭಾಶಯ ಕೋರಿದರು. ರೊ.ರಾಮ ರವರು ಓಣಂ ಆಚರಣೆ ಬಗ್ಗೆ ಮಾಹಿತಿ ನೀಡಿದರು..ರೊ.ಪಧ್ಮಾವತಿ ಯವರವರು ಪ್ರಾರ್ಥಿಸಿ ರೊ.ಮೌನೇಶ್ ವಿಶ್ವಕರ್ಮ ವಂದಿಸಿದರು. ಕ್ಲಬ್ ನ ಸದಸ್ಯ ಒಳಿತುಮಾಡು ಮನಷಾ ಸ್ಥಾಪಕಾಧ್ಯಕ್ಷ ರೊ.ಚೇತನ್ ಕುಮಾರ್ ರವರನ್ನು ಸಮಾಜ ಸೇವಾ ವಿಭಾಗದಲ್ಲಿ ಸಾರ್ವಜನಿಕ ಕಿಟ್ ವಿತರಣೆ ಕಾರ್ಯಕ್ರಮ ಅಯೋಜಿಸಿದ್ದಕ್ಕಾಗಿ ಅಭಿನಂದಿಸಲಾಯಿತು.ರೊ.ಸ್ವೀಕೃತ್ ಮತ್ತು ಶ್ರೇಯಸ್ ರವರ ರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

Advertisement
Advertisement
Advertisement

Share post:

LEAVE A REPLY

Please enter your comment!
Please enter your name here