ಪುತ್ತೂರು:ರೊಟರಿ ಕ್ಲಬ್ ಇಲೈಟ್ ವತಿಯಿಂದ ಆ.9.ರಂದು ಪವಿತ್ರ ಮೊಹರಂ ಹಬ್ಬವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ “ಆದಿ ಮಾನವ ಆದಂ(ಅ.ಸ)ರಿಂದ ಪ್ರಾರಂಭವಾಗಿ ಮಹಮ್ಮದ್(ಸ.ಅ)ರ ತನಕ ಎಲ್ಲಾ ಪ್ರವಾದಿಗಳಿಗೂ ಅಧ್ಬುತ ಸಂರಕ್ಷಣೆ ಪಡದ ದಿನ ಮೊಹರಂ ಆಗಿದೆ.ಆದರಿಂದ ವಿಶ್ವಾದ್ಯಂತ ಈ ದಿನವನ್ನು ಸಂರಕ್ಷಣೆ ಮತ್ತು ಒಳಿತಿಗಾಗಿ ಪ್ರಾರ್ಥಿಸುವ ದಿನನವನ್ನಾಗಿ ಆರಿಸುತ್ತಾರೆ.ಎಂದು ಆ ದಿನದ ಮಹತ್ವದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ರೊ.ಅಡ್ವಕೇಟ್.ಮಹಮ್ಮದ್ ಶಾಕೀರ್ ರವರು ಉಪಾನ್ಯಾಸ ನೀಡಿದರು.ನಿ.ಪೂರ್ವ ಅಧ್ಯಕ್ಷ ರೊ.ಪೀಟರ್ ವಿ.ಪ್ರಭಾಕರ್ ಸಂದರ್ಭೋಚಿತವಾಗಿ ಮಾತನಾಡಿದರು.ಅಧ್ಯಕ್ಷ ರೊ.ರಝಾಕ್ ಕಬಕಕಾರ್ಸ್ ರವರು ಸ್ವಾಗತಿಸಿ ಇಲೈಟ್ ಈ ವರ್ಷ ರೊಟರಿಯ ಸಾರ್ವಕಾಲಿಕ ದ್ಯೇಯ “diversity equity inclusion ‘ ಗೆ ಹೆಚ್ಚಿನ ಒತ್ತು ನೀಡಲಿದೆ ಎಂದರು.ಕೊಶಾಧಿಕಾರಿ ರೊ.ಸಿಲ್ವಿಯಾ ಡಿ.ಸೋಜ ರವರು ಪ್ರಾರ್ಥಿಸಿ ಕಾರ್ಯದರ್ಶಿ ರೊ.ಆಸ್ಕರ ಆನಂದ್ ವಂದಿಸಿದರು.ಇದೇ ಸಂದರ್ಭ ಪತ್ರಕರ್ತ ರೊ.ಮೌನೇಶ್ ವಿಶ್ವಕರ್ಮ ರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
Super sir