
ಬೆಂಗಳೂರು: ಪ್ರೇಮ್ ನಿರ್ದೇಶನದ, ದರ್ಶನ್ ಅಭಿನಯಿಸಿದ 2003ರಲ್ಲಿ ತೆರೆಕಂಡ ಹಿಟ್ ಸಿನಿಮಾ ‘ಕರಿಯ’. ನಂತರ ಈ ಕಾಂಬಿನೇಷನ್‌ನಲ್ಲಿ ಸಿನಿಮಾ ಬಂದಿರಲಿಲ್ಲ. ಇದೀಗ 20 ವರ್ಷಗಳ ನಂತರ ಪ್ರೇಮ್, ದರ್ಶನ್ ಮತ್ತೆ ಒಂದಾಗುತ್ತಿದ್ದಾರೆ.
ಕೆವಿಎನ್ ಪ್ರೊಡಕ್ಷನ್‌ನಲ್ಲಿ ಮೂಡಿಬರಲಿರುವ ಹೊಸ ಚಿತ್ರಕ್ಕಾಗಿ ಇಬ್ಬರೂ ಮತ್ತೆ ಜತೆಯಾಗಿದ್ದಾರೆ. ಇತ್ತೀಚೆಗಷ್ಟೆ ದರ್ಶನ್, ಪ್ರೇಮ್, ರಕ್ಷಿತಾ ಪ್ರೇಮ್, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ ಮಾಲೀಕ ಕೋನಾ ವೆಂಕಟ್ ನಾರಾಯಣ್ ಮತ್ತು ಕ್ರಿಯೇಟಿವ್ ಹೆಡ್ ಸುಪ್ರೀತ್ ಭೇಟಿಯಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಸದ್ಯ ಅವರ ಭೇಟಿಯ ಕೆಲವು ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸದ್ಯ ದರ್ಶನ್ ತರುಣ್ ಸುಧೀರ್ ನಿರ್ದೇಶಿಸುತ್ತಿರುವ ‘ಕಾಟೇರ’ ಸಿನಿಮಾದಲ್ಲಿ ಬಿಜಿಯಿದ್ದಾರೆ.Advertisement