
ಕನ್ನಡದ ನಟಿ ಶ್ರೀಲೀಲಾ (Sreeleela) ಇದೀಗ ತೆಲುಗು ಚಿತ್ರರಂಗದಲ್ಲಿ (Tollywood) ಸೌಂಡ್ ಮಾಡ್ತಿದ್ದಾರೆ. ಟಾಪ್ ಸ್ಟಾರ್ ನಟರಿಗೆ ನಾಯಕಿಯಾಗಿ ಶ್ರೀಲೀಲಾ ಮೆರೆಯುತ್ತಿದ್ದಾರೆ. ‘ಧಮಾಕ’ (Dhamaka) ಸಕ್ಸಸ್ ನಂತರ 10ಕ್ಕೂ ಹೆಚ್ಚು ಸಿನಿಮಾಗಳಿಗೆ ಲೀಲಾ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಕನ್ನಡದ ನಟಿಮಣಿಗೆ ಇರುವ ಡಿಮ್ಯಾಂಡ್ ನೋಡಿ, ಸಮಾರಂಭವೊಂದರಲ್ಲಿ ಶ್ರೀಲೀಲಾ ಸರಸ್ವತಿ ವರಪ್ರಸಾದ ಎಂದು ಹಾಡಿಹೊಗಳಿದ್ದಾರೆ.