ಇತರೆ

ಎರಡು ವರ್ಷದೊಳಗೆ ಸರಕಾರೀಕರಣಗೊಂಡ ದೇವಸ್ಥಾನವನ್ನು ಮರಳಿ ಭಕ್ತರಿಗೆ ಒಪ್ಪಿಸಬೇಕು ! – ನ್ಯಾಯವಾದಿ ಕಿರಣ ಬೆಟ್ಟದಪುರ

ಬೆಂಗಳೂರು : ದೇವಸ್ಥಾನದಲ್ಲಿ ಅವ್ಯವಹಾರ ಅಥವಾ ಜಗಳ ನಡೆದಾಗ ಅಂತಹ ದೇವಸ್ಥಾನವನ್ನು ಸರ್ಕಾರ ಸರ್ಕಾರಿಕರಣಗಳಿಸಬಹುದು ಆದರೆ ಎರಡು ವರ್ಷದೊಳಗೆ ಸಮಸ್ಯೆಗಳನ್ನೆಲ್ಲವನ್ನು ಪರಿಹರಿಸಿ ಆ ದೇವಸ್ಥಾನವನ್ನು ಮರಳಿ ಭಕ್ತರಿಗೆ ಒಪ್ಪಿಸಬೇಕೆಂಬ ಕಾನೂನು ಇದೆಯೆಂದು ನ್ಯಾಯವಾದಿ ಕಿರಣ ಬೆಟ್ಟದಪುರ ಇವರು ಹೇಳಿದರು. ಅವರು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ ೧೬ ಹಾಗೂ ೧೭ ರಂದು ಬೆಂಗಳೂರಿನ ಗಂಗಮ್ಮ ತಿಮ್ಮಯ್ಯ ಕನ್ವೆಂಷನ್ ಸೆಂಟರ್ ನಲ್ಲಿ ದೇವಸ್ಥಾನಗಳ ರಾಜ್ಯ ಮಟ್ಟದ ಪರಿಷತ್ತು’ ನ ಎರಡನೆ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

Advertisement
Advertisement
Advertisement

ಅವರು ತಮ್ಮ ಮಾತನ್ನು ಮುಂದುವರೆಸಿ ಕರ್ನಾಟಕದಲ್ಲಿ ಸುಮಾರು ೩೫,೦೦೦ ದೇವಸ್ಥಾನಗಳು ಸರ್ಕಾರಿಕರಣಗೊಂಡಿದೆ.ದೇವಸ್ಥಾನಗಳ ಲೂಟಿ ಮಾಡುವುದು ಸರ್ಕಾರೀಕರಣದ ಮೂಲ ಉದ್ದೇಶ. ಅಂದರೆ ಸರ್ಕಾರೀಕರಣಗೊಂಡ ಎಲ್ಲಾ ದೇವಸ್ಥಾನಗಳಲ್ಲಿ ಭ್ರಷ್ಟಾಚಾರ ಅಥವಾ ಅ ವ್ಯವಹಾರ ನಡೆದಿದೆ ಎಂದು ಅರ್ಥವಾಗುತ್ತದೆ ಎಂದು ಅವರು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂಧೆ ಮಾತನಾಡುತ್ತ ಉತ್ತರ ಪ್ರದೇಶ ಸರ್ಕಾರ ಹಲಾಲ್ ಸರ್ಟಿಫಿಕೇಟ್ ನೀಡುವುದನ್ನು ನಿಷೇಧಿಸಿದ್ದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯು ಆಭಾರಿಯಾಗಿದ್ದೇವೆ. ನಮ್ಮ ೭೬ ವರ್ಷ ಭಾರತದ ಆರ್ಥಿಕತೆಯು ನಾಲ್ಕು ಟ್ರಿಲಿಯನ್ ಡಾಲರ್ ಇದೆ. ಕೇವಲ ೧೦ ವರ್ಷಗಳಲ್ಲಿ ವಿಶ್ವದಲ್ಲಿ ಹಲಾಲ್ ಆರ್ಥಿಕತೆ ಮೂರು ಟ್ರಿಲಿಯನ್ ಡಾಲರ್ ತಲುಪಿದೆ. ನಮ್ಮ ದೇಶದಲ್ಲಿ ಸರ್ಕಾರದ FSSAI ಸರ್ಟಿಫಿಕೇಟ್ ಇದ್ದರೂ ಸಹ ಪ್ರತಿ ಉತ್ಪಾದನೆಗೆ ೬೦ ಸಾವಿರ ರೂಪಾಯಿ ನೀಡಿ ಹಲಾಲ್ ಸರ್ಟಿಫಿಕೇಟ್ ತೆಗೆದುಕೊಳ್ಳುವ ಅವಶ್ಯಕತೆ ಏನಿದೆ? ಹಲಾಲ್ ಕೇವಲ ಮಾಂಸಕ್ಕಷ್ಟಕ್ಕಲ್ಲದೇ ಫ್ಯಾಶನ್, ಇಕ್ವಿಪ್ಮೆಂಟ್, ರೆಸಿಡೆನ್ಸಿ, ಟೂರಿಸಂ, ಸ್ಟಾಕ್ ಮಾರ್ಕೆಟ್, ಎಲೆಕ್ಟ್ರಿಕಲ್ ಐಟಂ,ಡೇಟಿಂಗ್ ಆ್ಯಪ್, ಹಾಸ್ಪಿಟಲ್ ಮುಂತಾದ ಕ್ಷೇತ್ರಗಳಲ್ಲಿ ವ್ಯಾಪಿಸಿಕೊಂಡಿದೆ. ಇಸ್ಲಾಂ ತಾನು ಜಗತ್ತನ್ನ ಆಳಬೇಕೆಂಬದು ಹಲಾಲ್ ಆರ್ಥಿಕತೆಯ ಉದ್ದೇಶವಾಗಿದೆಂದು ಹೇಳಿದರು. ಹಲಾಲ್ ಸರ್ಟಿಫಿಕೇಟ್ ನೀಡುವ ಜಮಿಯತ್ ಉಲೇಮಾ ಹಿಂದ್ ಸಂಸ್ಥೆಯು ಭಯೋತ್ಪಾದಕರಿಗೆ ಸಹಾಯ ಮಾಡುತ್ತಿರುವುದು ತಿಳಿದು ಬಂದಿದೆ.

ಹಲಾಲ ಮುಕ್ತ ಮಾಡುವ ಸಲುವಾಗಿ ಹಲಾಲ್ ಮುಕ್ತ ದೀಪಾವಳಿ, ಹಲಾಲ್ ಮುಕ್ತ ಯುಗಾದಿ ಈ ರೀತಿ ಎಲ್ಲಾ ಹಿಂದೂ ಹಬ್ಬ ಉತ್ಸವಗಳಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಜಾಗೃತಿಯನ್ನು ಮೂಡಿಸುತ್ತಿದೆ. ಗಾಜಾ ಪಟ್ಟಿಯ ಮೇಲಿನ ದಾಳಿಯ ನಂತರ ಹಲಾಲ್ ಸರ್ಟಿಫಿಕೇಟ್ ತೆಗೆದುಕೊಂಡವಾಗಲೂ ಸಹ ಅದು ಹರಾಮ್ ಆಗಿದೆಯೆಂದು ಪತ್ವವನ್ನು ಹೊರಡಿಸಲಾಗುತ್ತದೆ. ಹಲಾಲ್ ಸರ್ಟಿಫಿಕೇಟ್ ಇದು ವಸ್ತುವಿನ ಕ್ವಾಲಿಟಿ ನೋಡಿ ಕೊಡಲಾಗುತ್ತದೆಯೋ ಅಥವಾ ಇದೊಂದು ಧಾರ್ಮಿಕ ಸರ್ಟಿಫಿಕೇಟ್ ಆಗಿದೆಯೋ? ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಅನೇಕ ಧಾರ್ಮಿಕ ಸಂಸ್ಥೆಗಳು ಸೇರಿ ಹೋರಾಟ ಮಾಡಿದ್ದರಿಂದ ಪರಿಣಾಮವಾಗಿ ಸರಕಾರೀಕರಣಗೊಂಡ ಕೊಲ್ಲೂರು ಮೂಕಾಂಬಿಕೆ, ಪಂಡಾಪುರ, ತುಳಜಾ ಭವಾನಿ, ಶಿರ್ಡಿ ಸಾಯಿಬಾಬಾ ಸೇರಿದಂತೆ ಅನೇಕ ದೇವಸ್ಥಾಗಳಲ್ಲಿನ ಭ್ರಷ್ಟಾಚಾರ ಬಹಿರಂಗ ಮಾಡಿರುವುದರ ಕುರಿತು ಶ್ರೀ. ಗುರುಪ್ರಸಾದ ಗೌಡ ತಿಳಿಸಿದರು.

ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರಾದ ಶ್ರೀ. ಚೇತನ ರಾಜಹಂಸರವರು ಮಾತನಾಡಿ ನಗರ ನಕ್ಷಲರು ಸೇರಿಕೊಂಡು ಹಿಂದೂ ಧರ್ಮವನ್ನು ಭಯೋತ್ಪಾದನೆಗೆ ಹೋಲಿಸುವ ಷಡ್ಯಂತ್ರ ಮಾಡುವುದರೊಂದಿಗೆ ಸನಾತನ ಧರ್ಮದ ನಾಶ ಮಾಡಬೇಕೆಂಬ ಹೇಳಿಕೆಗಳನ್ನು ಬಹಿರಂಗವಾಗಿ ಹೇಳುತ್ತಿದ್ದಾರೆ. ಸನಾತನ ಧರ್ಮವನ್ನು ನಾಶ ಮಾಡುವುದೆಂದರೆ ೧೦೦ ಕೋಟಿ ಹಿಂದೂಗಳನ್ನು ನಾಶ ಮಾಡುವುದು ಅವರ ಉದ್ದೇಶವಾಗಿದೆಂದು ಹೇಳಿದರು.

ಇಂದಿನ ಕಾರ್ಯಕ್ರಮದಲ್ಲಿ ದೇವಸ್ಥಾನಗಳ ಸಮಸ್ಯೆಗಳಿಗೆ ಪ್ರಶ್ನೆಗಳಿಗೆ ನ್ಯಾಯವಾದಿಗಳಾದ ನ್ಯಾ. ಅಮೃತೇಶ, ನ್ಯಾ. ಕಿರಣ ಬೆಟ್ಟದಪುರ, ನ್ಯಾ. ಹರ್ಷಾ ಮುತಾಲಿಕ್ ರವರು ಮಾರ್ಗದರ್ಶನ ಮಾಡಿದರು.

ಸನಾತನ ಸಂಸ್ಥೆಯ ಪೂಜ್ಯನೀಯ ಶ್ರೀ ರಮಾನಂದ ಗೌಡ ಇವರು ಇಲ್ಲಿಯವರೆಗೆ ಸನಾತನ ಸಂಸ್ಥೆಯಿದ ಧರ್ಮಶಿಕ್ಷಣ ಮತ್ತು ಆದ್ಯಾತ್ಮ ಪ್ರಸಾರ ಕಾರ್ಯದ ಕುರಿತು ತಿಳಿಸುತ್ತಾ ದೇವಸ್ಥಾನಗಳನ್ನು ಧರ್ಮಶಿಕ್ಷಣ ಕೇಂದ್ರಗಳನ್ನಾಗಿಸುವುದು ಕುರಿತು ಮಾರ್ಗದರ್ಶನ ಮಾಡಿದರು.ಇವತ್ತು ಕರ್ನಾಟಕ ರಾಜ್ಯದ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಅಸ್ಥಾಯಿ ಕಮೀಟಿಯ ಸದಸ್ಯರ ಆಯ್ಕೆ ಮಾಡಲಾಯಿತು.

ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ (ಸಂಪರ್ಕ : ೭೨೦೪೦೮೨೬೦೯)

ommnews

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

1 year ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

1 year ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

1 year ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

1 year ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

1 year ago