ಮಡಿಕೇರಿ : ರೆಸಾರ್ಟ್‌ನಲ್ಲಿ ಮೂವರ ಮೃತದೇಹ ಪತ್ತೆ

0
91

ಮಡಿಕೇರಿ : ರೆಸಾರ್ಟ್ ವೊಂದರಲ್ಲಿ ಮಗು ಸೇರಿ ಮೂವರ ಮೃತದೇಹ ಪತ್ತೆಯಾಗಿರುವ ಘಟನೆ ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದಿಂದ ವರದಿಯಾಗಿದೆ.

ರೆಸಾರ್ಟ್ ನ ಕೋಣೆಯಲ್ಲಿ ಪತಿ, ಪತ್ನಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಗುವಿನ ಮೃತದೇಹ ಹಾಸಿಗೆಯಲ್ಲಿ ಪತ್ತೆಯಾಗಿದೆ.

ಕೇರಳ ರಾಜ್ಯದ ಕೊಟ್ಟಾಯಂ ಬಳಿಯ ಪಡಿಚಾಟು ಗ್ರಾಮದ ವಿನೋದ್ (37) ಹಾಗೂ ಅವರ ಪತ್ನಿ, ಮಗು ಮೃತಪಟ್ಟಿದ್ದಾರೆ. ಮೊದಲು ಮಗುವಿನ ಪ್ರಾಣವನ್ನು ತೆಗೆದು ದಂಪತಿ ನೇಣಿಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಶುಕ್ರವಾರ ಸಂಜೆ ವೇಳೆಗೆ ಪ್ರವಾಸಕ್ಕೆಂದು ಕೊಡಗಿಗೆ ಬಂದವರು ರೆಸಾರ್ಟ್ ನಲ್ಲಿ ತಂಗಿದ್ದರು ಎಂದು ಹೇಳಲಾಗಿದೆ.ಕೇರಳದಿಂದ ಕುಟುಂಬದ ಸದಸ್ಯರು ಬಂದ ನಂತರವಷ್ಟೇ ಹೆಚ್ಚಿನ ಮಾಹಿತಿ ತಿಳಿಯಲಿದೆ. ಸ್ಥಳಕ್ಕೆ ಮಡಿಕೇರಿ ಗಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

LEAVE A REPLY

Please enter your comment!
Please enter your name here