ಪುತ್ತೂರು: ರಾಜ್ಯ ತೋಟಗಾರಿಕಾ ಸಚಿವರ ಜೊತೆ ಹವಾಮಾನ ಆಧಾರಿತ ಬೆಳೆ ವಿಮೆ ಸರಕಾರದಿಂದ ಇನ್ನೂ ಬಿಡುಗಡೆಯಾಗದ ಕುರಿತು ಮಾತುಕತೆ ನಡೆಸಿದ ಪುತ್ತೂರು ಶಾಸಕ ಅಶೋಕ್ ರೈ ಬೆಳೆ ವಿಮೆಯನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದರು.
ಈ ಬಗ್ಗೆ ಶಾಸಕರಿಗೆ ಭರವಸೆ ನೀಡಿದ ಸಚಿವರು ಮುಂದಿನ ವಾರ ದ.ಕ ಹಾಗೂ ಉಡುಪಿ ಜಿಲ್ಲೆಗೆ ವಿಮಾ ಮೊತ್ತ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಉಭಯ ಜಿಲ್ಲೆಯ ರೈತರು ಯಾವುದೇ ಆತಂಕ ಪಡಬೇಕಾದ ಅವಶ್ಯಕತೆಯಿಲ್ಲ ಬೆಳೆ ವಿಮಾ ಮೊತ್ತವನ್ನು ಮುಂದಿನ ವಾರ ಎಲ್ಲಾ ಫಲಾನುಭವಿ ಕೃಷಿಕರಿಗೆ ದೊರೆಯಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.