ಮಹಾಲಿಂಗೇಶ್ವರ ದೇವಸ್ಥಾನದ ದಂಡ್ ಶಿಲಾಲ್ ಪರಿಚಾರಕ ನಿಧನ

0
149

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ದಂಡ್ ಶಿಲಾಲ್ ಪರಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆರೆಮೂಲೆ ನಿವಾಸಿ ಸಂಪತ್ ಪೂಜಾರಿ (31) ಡಿ.6ರಂದು ಅನಾರೋಗ್ಯದಿಂದಾಗಿ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.

ಸಂಪತ್ ರವರು ಜೆಸಿಬಿ, ಹಿಟಾಚಿ ಹಾಗೂ ಟಿಪ್ಪರ್ ಹೊಂದಿದ್ದು, ಕೆಲಸ ನಿರ್ವಹಿಸುತ್ತಿದ್ದರು. ಮೃತರು ತಂದೆ ರಾಮಚಂದ್ರ , ತಾಯಿ ವೀಣಾ, ಸಹೋದರ ಶರತ್ ಅವರನ್ನು ಅಗಲಿದ್ದಾರೆ.

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉತ್ಸವ ಸಂದರ್ಭ ದಂಡ್ ಶಿಲಾಲ್ ಹೊರುವ ಕಾರ್ಯದಲ್ಲಿ ಸಂಪತ್ ಹಾಗೂ ಶರಣ್ ಸಹೋದರರು ಕಾರ್ಯನಿರ್ವಹಿಸುತ್ತಿದ್ದರು.

LEAVE A REPLY

Please enter your comment!
Please enter your name here