ಪುತ್ತೂರು : ಡಿ. 5 ರಂದು ಭಕ್ತಕೋಡಿ ಸಮೀಪದ ಪಾಲೆತ್ತಗುರಿ ನಿವಾಸಿ ವಿನೋದ್ ಎಂಬವರು ನಿಧನರಾಗಿದ್ದಾರೆ.
ಇವರು ಭಕ್ತಕೋಡಿಯಲ್ಲಿ ರಿಕ್ಷಾ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು.ವಿನೋದ್ ಅವರಿಗೆ 2 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು ಅದಕ್ಕೆ ಕ್ಲಿನಿಕ್ ನಿಂದ ಔಷಧಿ ತೆಗೆದುಕೊಂಡಿದ್ದರು. ಡಿ. 4ರಂದು ರಾತ್ರಿ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಡಿ. 5ರಂದು ಬೆಳಗ್ಗೆ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಯಿತಾದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ.
ಮೃತರು ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.