ಮಂಗಳೂರಿನ ಲಾಡ್ಜ್ ರೂಮ್ ನಲ್ಲಿ ಬೆಂಕಿ, ಓರ್ವ ಸಾವು

0
97

ಮಂಗಳೂರು: ಬೆಂದೂರ್ ವೆಲ್ ಲಾಡ್ಜ್ ನ ರೂಮ್ ಒಂದರಲ್ಲಿ ಮಧ್ಯರಾತ್ರಿ ಬಳಿಕ‌ ಸುಮಾರು 12:35 ಕ್ಕೆ ಬೆಂಕಿ ಕಾಣಿಸಿಕೊಂಡು ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಸಂಭವಿಸಿದೆ.

ಬಿಕರ್ನಕಟ್ಟೆ ನಿವಾಸಿ ಯಶ್ರಾಜ್ ಎಸ್.‌ಸುವರ್ಣ(43) ಮೃತಪಟ್ಟವರು.

ಯಶ್ರಾಜ್ ಅವರ ಮೃತದೇಹ ಮಲಗಿದ ಸ್ಥಿತಿಯಲ್ಲಿದ್ದು, ಬಾಗಿಲಿನ ಚಿಲಕ ಹಾಕಿಕೊಂಡಿದ್ದರು.‌ ಅನಂತರ ಲಾಡ್ಜ್ ನವರು ತೆರೆದಾಗ ಬೆಂಕಿ ಆವರಿಸಿತ್ತು. ಅಗ್ನಿಶಾಮಕದವರಿಗೆ ತಿಳಿಸಿದರು ಎನ್ನಲಾಗಿದೆ.

ಪಾಂಡೇಶ್ವರ ಅಗ್ನಿಶಾಮಕ ಠಾಣೆಯವರು ಬೆಂಕಿ‌ ನಂದಿಸಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಯುತ್ತಿದೆ.

ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

LEAVE A REPLY

Please enter your comment!
Please enter your name here