ಮಲಯಾಳಂ ಚಿತ್ರದಲ್ಲಿ ನಟಿಸಲಿರುವ ಕರಾವಳಿ ನಾಯಕ ರಾಜ್ ಬಿ ಶೆಟ್ಟಿ

0
113

ಸ್ಟಾರ್ ನಟ ಮಮ್ಮಟ್ಟಿ ನಾಯಕನಾಗಿ ನಟಿಸುತ್ತಿರುವ ಟರ್ಬೋ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ವಿಶೇಷ ಪಾತ್ರವನ್ನು ಮಾಡಲಿದ್ದಾರೆ. ಸ್ವತಃ ಚಿತ್ರತಂಡವೇ ಈ ಮಾಹಿತಿಯನ್ನು ಹೊರ ಹಾಕಿದೆ.

ಒಂದು ಕಡೆ ಎರಡೆರಡು ಮಲೆಯಾಳಂ ಸಿನಿಮಾದಲ್ಲಿ ರಾಜ್ ನಟಿಸುತ್ತಿದ್ದರೆ, ಮತ್ತೊಂದು ಕಡೆ ಮಲಯಾಳಂ ಸಿನಿಮಾವೊಂದನ್ನು ಅವರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾಹಿತಿಯೂ ಸಿಕ್ಕಿದೆ. ದುಲ್ಕರ್ ಸಲ್ಮಾನ್ ಗಾಗಿ ರಾಜ್ ಶೆಟ್ಟಿ ಚಿತ್ರವೊಂದನ್ನು ನಿರ್ದೇಶನ ಮಾಡಲಿದ್ದಾರೆ.

ಈ ಅಚ್ಚರಿಯ ಸುದ್ದಿಯನ್ನು ಹಂಚಿಕೊಂಡಿದ್ದು ಸ್ವತಃ ದುಲ್ಕರ್ ಸಲ್ಮಾನ್. ಅವರದ್ದೇ ನಿರ್ಮಾಣ ಸಂಸ್ಥೆಯಿಂದ ಈ ಚಿತ್ರ ಮೂಡಿ ಬರಲಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಅಲ್ಲಿಗೆ ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರರಂಗಕ್ಕೆ ನಿರ್ದೇಶಕರಾಗಿ ಹಾರಲಿದ್ದಾರೆ ಎನ್ನುವುದು ಲೇಟೆಸ್ಟ್ ಮಾಹಿತಿ.

ರಾಜ್ ಬಿ ಶೆಟ್ಟಿ ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ದುಲ್ಕರ್ ಮಾತನಾಡಿದ್ದು, ಉಳಿದಂತೆ ಯಾವ ವಿಚಾರವನ್ನೂ ಅವರು ಹಂಚಿಕೊಂಡಿಲ್ಲ. ಬಟ್, ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರೋದ್ಯಮಕ್ಕೆ ನಿರ್ದೇಶಕರಾಗಿ ಬರುವುದು ಪಕ್ಕಾ ಎನ್ನುವುದನ್ನು ಖಚಿತ ಪಡಿಸಿದ್ದಾರೆ.

ಸದ್ಯ ಶೆಟ್ಟರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here