ಮುಂಬಯಿ: ಆಸ್ಕರ್ ಪ್ರಶಸ್ತಿಯಂತೆಯೇ ಜನಪ್ರಿಯತೆಯನ್ನು ಪಡೆದುಕೊಂಡಿರುವ,ಟಿವಿ ಶೋಗಳಿಗಾಗಿ ನೀಡಲಾಗುವ ಪ್ರತಿಷ್ಠಿತ ʼಎಮ್ಮಿ ಪ್ರಶಸ್ತಿʼಯನ್ನು ಭಾರತದ ಜನಪ್ರಿಯ ಕಮಿಡಿಯನ್ ಹಾಗೂ ನಟರೊಬ್ಬರು ಗೆದ್ದುಕೊಂಡಿದ್ದಾರೆ.
ಜಗತ್ತಿನ ಅತ್ಯುತ್ತಮ ಟಿವಿಶೋಗಳಿಗಾಗಿʼಎಮ್ಮಿʼ ಎನ್ನುವ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಇದು ಆಸ್ಕರ್‌ನಂತೆ ಜನಪ್ರಿಯವಾಗಿದೆ. ಭಾರತದ ಶೋಗಳು ಅಥವಾ ಕಲಾವಿದರು ಈ ಪ್ರಶಸ್ತಿಯನ್ನು ಗೆದ್ದಿರುವುದು ಕಡಿಮೆ. ಈ ಬಾರಿ ಭಾರತದ ಖ್ಯಾತ ಕಮಿಡಿಯನ್ ವೀರ್ ದಾಸ್ ಎಮ್ಮಿಯ ಯೂನಿಕ್ ಕಾಮಿಡಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗುತ್ತಿರುವ ವೀರ್ ದಾಸ್ರ ಕಾಮಿಡಿ ಸ್ಪೆಷಲ್ ‘ವೀರ್ ದಾಸ್; ಲ್ಯಾಂಡಿಂಗ್ʼ ಶೋಗಾಗಿ ವೀರ್ ದಾಸ್ ʼಎಮ್ಮಿʼ ಪ್ರಶಸ್ತಿಯನ್ನು ಗೆದ್ದಿದ್ದಾರೆ.