‘ಬಿಗ್ ಬಾಸ್‌’ ಕನ್ನಡ 10ರ ಜರ್ನಿ ಮುಗಿಸಿದ ನಟಿ ಭಾಗ್ಯಶ್ರೀ

0
83

ಭಾನುವಾರದ ‘ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ’ ಸಂಚಿಕೆಯಲ್ಲಿ ಭಾಗ್ಯಶ್ರೀ ಮನೆಯಿಂದ ಹೊರಬಿದ್ದಿದ್ದಾರೆ.

ಭಾಗ್ಯಶ್ರೀ ಅವರು ಬಿಗ್ ಬಾಸ್ ಮನೆಯೊಳಗೆ ಹಲವು ಬಾರಿ ನಾಮಿನೇಟ್ ಆಗಿದ್ದರು. ಕೆಲವು ಕಾರಣದಗಳಿಂದಾಗಿ ನಾಮಿನೇಟ್‌ನಿಂದಲೂ ಬಚಾವ್ ಆಗಿದ್ದರು. ಆದರೆ ಈ ವಾರ ಅದೃಷ್ಟ ಅವರ ಕಡೆಗೆ ಇರಲಿಲ್ಲ. ಕಳೆದ ವಾರ ವರ್ತೂರು ಸಂತೋಷ್‌ ಕಾರಣದಿಂದ ಎಲಿಮಿನೇಷನ್ ಮಾಡಿರಲಿಲ್ಲ. ಆದರೆ ಈ ವಾರ ಡಬಲ್ ಎಲಿಮಿನೇಷನ್ ಮಾಡಲಾಗಿದೆ. ಶನಿವಾರದ (ನ.18) ಸಂಚಿಕೆಯಲ್ಲಿ ಈಶಾನಿ ಅವರು ಎಲಿಮಿನೇಟ್ ಆಗಿದ್ದರು.

ಮಾತು ಮಾತಿಗೂ ಕಣ್ಣೀರು ಸುರಿಸುವ ಭಾಗ್ಯಶ್ರೀ ಸ್ವಭಾವದಿಂದ ಅಳುಮುಂಜಿಯಾಗಿ ಬಿಂಬಿತವಾಗಿದ್ದರೂ, ಅವರು ಇಷ್ಟು ವಾರಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಹಾಗೆ ನೋಡಿದರೆ ಎರಡು ವಾರಗಳ ಹಿಂದೆಯೇ ಅವರು ‘ಬಿಗ್‌ ಬಾಸ್’ ಮನೆಯಿಂದ ಅವರು ಹೊರಗೆ ಹೋಗಬೇಕಾಗಿತ್ತು. ಭಾಗ್ಯಶ್ರೀ ಎಲಿಮಿನೇಟ್ ಆಗಿರುವ ಸಂಗತಿಯನ್ನು ಸ್ವತಃ ಸುದೀಪ್‌ ಘೋಷಿಸಿದ್ದರು. ಆದರೂ ಬಿಗ್‌ ಬಾಸ್ ಮನೆಯ ಮುಖ್ಯದ್ವಾರ ತೆರೆದಿರಲಿಲ್ಲ.

ಬಿಗ್‌ ಬಾಸ್ ಆ ವಾರ ದಸರಾ ಹಬ್ಬದ ಕಾರಣಕ್ಕಾಗಿ ಯಾರನ್ನೂ ಎಲಿಮಿನೇಟ್ ಮಾಡದೇ ಉಳಿಸಿಕೊಂಡಿದ್ದರು. ನಂತರದ ವಾರದಲ್ಲಿ ‘ಡ್ರೋನ್’ ಪ್ರತಾಪ್‌ ಅವರು ಭಾಗ್ಯಶ್ರೀ ಅವರನ್ನು ನಾಮಿನೇಷನ್‌ ಪಟ್ಟಿಯಿಂದ ಪಾರುಮಾಡಿದ್ದರು. ಆದರೆ ಈ ವಾರ ಅದೃಷ್ಟ ಭಾಗ್ಯಶ್ರೀ ಪರವಾಗಿ ಇರಲಿಲ್ಲ.

ಭಾಗ್ಯಶ್ರೀ ಅವರು ಸದಾ ಅಳುತ್ತಿದ್ದರು. ಅದು ಎಲ್ಲೋ ಒಂದು ಕಡೆ ಅವರಿಗೆ ಮೈನಸ್ ಪಾಯಿಂಟ್ ಆಗಿತ್ತು. ಹೇಳಿದ್ದ ವಿಚಾರವನ್ನೇ ಪದೇ ಪದೇ ಹೇಳುತ್ತಾರೆ ಎಂಬ ಆರೋಪ ಕೂಡ ಅವರ ಮೇಲೆ ಇತ್ತು. ಅದೇ ಕಾರಣಕ್ಕೆ ಅವರನ್ನು ನಾಮಿನೇಟ್ ಕೂಡ ಮಾಡಿದ್ದರು ಇತರೆ ಸ್ವರ್ಧಿಗಳು. ಟಾಸ್ಕ್ ವಿಚಾರದಲ್ಲೂ ಅವರು ಇನ್ನಷ್ಟು ಅಗ್ರೆಸ್ಸಿವ್ ಆಗಿ ಆಡುವ ಅವಶ್ಯಕತೆ ಇತ್ತು. ಅಳುವುದರ ಬದಲಿಗೆ ತಮ್ಮ ಹೇಳಿಕೆಗಳನ್ನು ಗಟ್ಟಿ ಧ್ವನಿಯಲ್ಲಿ ಅವರು ನೀಡಬೇಕು ಎಂಬ ಅಭಿಪ್ರಾಯ ಅವರ ಬಗ್ಗೆ ವ್ಯಕ್ತವಾಗಿತ್ತು.

LEAVE A REPLY

Please enter your comment!
Please enter your name here