ಮುಂಬಯಿ: ಬಾಲಿವುಡ್ ಸಿನಿಮಾರಂಗದ ಖ್ಯಾತ ನಿರ್ದೇಶಕ ಸಂಜಯ್ ಗಧ್ವಿ(57) ಭಾನುವಾರ(ನ.19 ರಂದು) ನಿಧನರಾಗಿದ್ದಾರೆ.
ಭಾನುವಾರ ಮುಂಜಾನೆ ಲೋಖಂಡವಾಲಾದಲ್ಲಿ ಮಾರ್ನಿಂಗ್ ವಾಕ್ ಮಾಡುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಅವರ ದೇಹ ಬೆವರಲು ಆರಂಭಿಸಿದ್ದು, ಅವರು ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಪರಿಕ್ಷೀಸಿದ ಬಳಿಕ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ನಿರ್ದೇಶಕ ಸಂಜಯ್ ಅವರ ನಿಧನಕ್ಕೆ ಯಶ್ ರಾಜ್ ಫಿಲ್ಮ್ಸ್ ಸೇರಿದಂತೆ ಅನೇಕ ಕಲಾವಿದರು, ನಿರ್ದೇಶಕರು, ಸಿನಿಮಂದಿ ಕಂಬನಿ ಮಿಡಿದಿದ್ದಾರೆ.