2023ರ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ನಿಕರಾಗುವಾದ ಶೆನ್ನಿಸ್ ಪಲಾಸಿಯೊಸ್

By: Ommnews

Date:

Share post:

ಸ್ಯಾನ್ ಸಾಲ್ವಡಾರ್‌: 2023 ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ನಿಕರಾಗುವಾದ ಸುಂದರಿ ಶೆನ್ನಿಸ್ ಪಲಾಸಿಯೊಸ್ ಅವರು ಮೊದಲ ಸ್ಥಾನ ಪಡೆದು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 72ನೇ ವಿಶ್ವ ಸುಂದರಿ ಕಾರ್ಯಕ್ರಮವು ಎಲ್ ಸಾಲ್ವಡಾರ್‌ ನ ಸ್ಯಾನ್ ಸಾಲ್ವಡಾರ್‌ ನಲ್ಲಿರುವ ಜೋಸ್ ಅಡಾಲ್ಫೊ ಪಿನೆಡಾ ಅರೆನಾದಲ್ಲಿ ನಡೆಯಿತು.

Advertisement
Advertisement
Advertisement

ನವೆಂಬರ್ 19 ರಂದು ಜೋಸ್ ಅಡಾಲ್ಫ್ ಪಿನೆಡಾ ಅರೆನಾದಲ್ಲಿ ನಡೆದ ಭವ್ಯ ಈವೆಂಟ್‌ನಲ್ಲಿ ಭಾರತದ ಶ್ವೇತಾ ಶಾರದಾ ಅವರನ್ನು ಸೋಲಿಸುವ ಮೂಲಕ ಶೆನ್ನಿಸ್ ಪಲಾಸಿಯೋಸ್ 2023 ರ ವಿಶ್ವ ಸುಂದರಿ ಪ್ರಶಸ್ತಿ ಪಡೆದರು.

2022ರ ವಿಶ್ವ ಸುಂದರಿ ಯುಎಸ್‌ಎ ನ ಗ್ಯಾಬ್ರಿಯೆಲ್ ಅವರು ವೇದಿಕೆಯಲ್ಲಿ ಶೆನ್ನಿಸ್ ಪಲಾಸಿಯೊಸ್ ಅವರಿಗೆ ಕಿರೀಟ ತೊಡಿಸಿ ಅಲಂಕರಿಸಿದರು. ಶೆನ್ನಿಸ್ ಪಲಾಸಿಯೊಸ್ ಈ ವರ್ಷ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದ ಮೊದಲ ನಿಕರಾಗುವಾ ಮಹಿಳೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section