ಪೊಲೀಸ್‌ ಸಿಬ್ಬಂದಿಗೆ ಹಲ್ಲೆ ಪ್ರಕರಣ: ಆರೋಪಿ ಬಂಧನ

0
96

ಪುತ್ತೂರು : ಅಮಲು ಪದಾರ್ಥದ ನಶೆಯಲ್ಲಿ ಜಲ್ಲಿಕಲ್ಲಿನಿಂದ ಪೊಲೀಸ್‌ ಸಿಬ್ಬಂದಿಗೆ ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಡಗನ್ನೂರು ಮುಂಡೋಲೆ ನಿವಾಸಿ ಹರೀಶ್‌ ಬಂಧಿತ ಆರೋಪಿ. ಪುತ್ತೂರು ಸಂಚಾರ ಠಾಣೆಯ ಸಿಬ್ಬಂದಿ ಶಿವಪ್ರಸಾದ್‌ ಹಲ್ಲೆಗೊಳಗಾದ ಪೊಲೀಸ್‌ ಸಿಬ್ಬಂದಿ.

ನ.16ರಂದು ಸಂಜೆ ಸಾರ್ವಜನಿಕ ದೂರಿನ ಮೇರೆಗೆ ಶಿವಪ್ರಸಾದ್‌ ಅವರು ಹೊಯ್ಸಳ ವಾಹನದಲ್ಲಿ ಬಂದು ಮಿನಿ ವಿಧಾನಸೌಧದ ಬಳಿ ಇಬ್ಬರು ಮಕ್ಕಳೊಂದಿಗೆ ನಿಂತಿದ್ದ ಮಹಿಳೆಯೋರ್ವರನ್ನು ವಿಚಾರಿಸುತ್ತಿದ್ದಾಗ ಆಕೆಯ ಗಂಡ, ಆರೋಪಿ ಹರೀಶ್‌ ಅಲ್ಲಿಗೆ ಬಂದು ಜಲ್ಲಿ ಕಲ್ಲಿನಿಂದ ಹೊಡೆದು ಗಾಯಗೊಳಿಸಿರುವುದಾಗಿ ಆರೋಪಿಸಲಾಗಿದೆ.

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಶಿವಪ್ರಸಾದ್‌ ಅವರು ನೀಡಿದ್ದ ದೂರಿನ ಮೇರೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here