ವಿಂಚ್ ಬೋಟ್ ಪ್ಯಾರಾಸೈಲಿಂಗ್ ವೇಳೆ ಬಿದ್ದು ಬಾಲಕನಿಗೆ ಗಾಯ

0
79

ಮಲ್ಪೆ: ಪ್ರವಾಸಿಗ ಬಾಲಕ ವಿಂಚ್ ಬೋಟ್ ಪ್ಯಾರಾಸೈಲಿಂಗ್ ಮಾಡುತ್ತಿದ್ದ ವೇಳೆ ಬಿದ್ದು ಗಾಯಗೊಂಡ ಘಟನೆ ಶುಕ್ರವಾರ ಮಲ್ಪೆ ಬೀಚ್ ನಲ್ಲಿ ಸಂಭವಿಸಿದೆ.

ಅವಘಡದಲ್ಲಿ ಬೆಂಗಳೂರು ಮೂಲದ ಇಕ್ಷ್ಯಾನ್ ಚೌಧರಿ (12) ಎಂಬ ಬಾಲಕ ಗಾಯಗೊಂಡಿದ್ದಾನೆ.

ಸೂಕ್ತ ಸುರಕ್ಷತ ಕ್ರಮಗಳನ್ನು ಕೈಗೊಳ್ಳದ ಕಾರಣ ಈ ಅನಾಹುತ ಸಂಭವಿಸಿದ್ದು, 10 ಮೀಟರ್ ಎತ್ತರದಿಂದ ಬೋಟಿಗೆ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿದೆ.ಬಾಲಕನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ.

ಮಲ್ಪೆ ಬೀಚ್ ನಲ್ಲಿ ತಿಂಗಳ ಹಿಂದೆಯಷ್ಟೇ ಪ್ರವಾಸಿಗರಿಗೆ ಅವಕಾಶ ನೀಡಲಾಗಿತ್ತು. ಅಡ್ವೆಂಚರ್ ಚಟುವಟಿಕೆ, ದೋಣಿ ವಿಹಾರ ಆರಂಭವಾಗಿತ್ತು. ಆದರೆ ಈ ಕುರಿತು ಟೆಂಡರ್ ಪಡೆದಿರುವವರು ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿಲ್ಲ. ಬೋಟಿಂಗ್ ವೇಳೆಯಲ್ಲಿ ದೋಣಿಯ ಸಾಮರ್ಥ್ಯಕ್ಕಿಂ ತ ಅಧಿಕ ಜನರನ್ನು ಹತ್ತಿಸಿಕೊಳ್ಳಲಾಗುತ್ತದೆ.

ನಿಯಮ ಮೀರಿ ಇಂತಹ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುಭಾಷ್ ನಾಯ್ಕ ಅವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here