ಹೊಂಬಾಳೆ ಸಂಸ್ಥೆ ನಿರ್ಮಾಣದ, ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ 2’ ಚಿತ್ರದ ಮುಹೂರ್ತ ಇದೇ ನವೆಂಬರ್ 27ರಂದು ಸೋಮವಾರ ಸರಳವಾಗಿ ಜರುಗಲಿದೆ.
ಕಾಂತಾರ ಸೂಪರ್ ಡೂಪರ್ ಹಿಟ್ ಆದಂತೆಯೇ ‘ಕಾಂತಾರ 2’ ಅದಕ್ಕಿಂತ ಹೆಚ್ಚಿನ ಯಶಸ್ಸು ಪಡೆದು ಗೆದ್ದು ಬೀಗಲೇಬೇಕೆಂದು ರಿಷಬ್ ಶೆಟ್ಟಿ ಕೂಡ ತೆರೆಮರೆಯಲ್ಲಿ ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡೆ ಅಖಾಡಕ್ಕೆ ಕಾಲಿಡುತ್ತಿದ್ದಾರೆ.
ಅದಕ್ಕಾಗಿ ತಮ್ಮ ಲುಕ್ ಕೂಡ ಜೇಂಜ್ ಮಾಡಿ, ಸಿನಿಮಾ ಕಥೆಯಲ್ಲಿ ಸಾಕಷ್ಟು ಕೆಲಸ ಮಾಡಿಯೇ ಕಾಂತಾರ 2ಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಕೂಡ ಶುರುವಾಗಲಿದೆ.