ಅಹಮದಾಬಾದ್: ದಕ್ಷಿಣ ಆಫ್ರಿಕಾ ತಂಡ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಗೆಲುವು ಸಾಧಿಸಿದೆ.
ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಅಫಘಾನಿಸ್ತಾನ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್ಗಳಲ್ಲಿ 244 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 247 ರನ್ ಬಾರಿಸಿ ಗೆಲುವು ಸಾಧಿಸಿತು.
ದಕ್ಷಿಣ ಆಫ್ರಿಕಾ ಗೆಲುವನ್ನು ಪಡೆದ ಹೊರತಾಗಿಯೂ ನಿರೀಕ್ಷಿಸಿದ ರೀತಿಯಲ್ಲಿ ದೊರಕಲಿಲ್ಲ. ಮಧ್ಯಮ ಓವರ್ಗಳಲ್ಲಿ ವಿಕೆಟ್ಗಳನ್ನು ಕಳೆದುಕೊಂಡಿತು. ವ್ಯಾನ್ ಡೆರ್ ಡುಸೆನ್ (76) ಅತ್ಯುತ್ತಮ ಪ್ರದರ್ಶನ ನೀಡಿ ತಂಡವನ್ನು ಗೆಲ್ಲಿಸಿದರು. ಅವರು ತಂಡದ ಮೇಲೆ ಒತ್ತಡ ಬೀಳಲು ಬಿಡಲಿಲ್ಲ. ಅವರು ಕೊನೇ ತನಕ ಔಟಾಗದೇ ಉಳಿದು ಗೆಲ್ಲಿಸಿಕೊಟ್ಟರು. ಇದಕ್ಕೂ ಮುನ್ನ ಡಿ ಕಾಕ್ ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಆರಂಭ ನೀಡಿದರು. ಅವರು 41 ರನ್ ಬಾರಿಸಿದರು.
ನಾಯಕ ಬವುಮಾ (23 ರನ್) ಲಯ ಮತ್ತು ಫಿಟ್ನೆಸ್ ಪಡೆದು ಹೋರಾಡುವಲ್ಲಿ ಹೆಣಗಾಡಿದರು. ಮಾರ್ಕ್ರಮ್ (25), ಕ್ಲಾಸೆನ್ (10 ನರ್) ಮತ್ತು ಮಿಲ್ಲರ್ (24) ಗೆಲುವಿಗಾಗಿ ಕೊಡುಗೆ ಕೊಟ್ಟರು. ಕೊನೆಯಲ್ಲಿ ಫೆಹ್ಲುಕ್ವಾಯೊ (39) ಬಿರುಸಿನ ಆಟವಾಡಿ ಗೆಲುವು ತಂದುಕೊಟ್ಟರು. ಅವರುವ್ಯಾನ್ ಡೆರ್ ಡುಸೆನ್ ಅವರೊಂದಿಗೆ 65 ರನ್ಗಳ ಜತೆಯಾಟ ನೀಡಿದರು.
ಅಫ್ಘಾನಿಸ್ತಾನ ತಂಡದ ಅಜ್ಮತುಲ್ಲಾ ಒಮರ್ಜೈ ಅಜೇಯ 97 ರನ್ ಬಾರಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ನೂರ್ ಅಹಮದ್ 26 ರನ್ ಹಾಗೂ ರಹ್ಮತ್ ಶಾ 26 ರನ್ ಮತ್ತು ಗುರ್ಬಜ್ 25 ರನ್ ಗಳಿಸಿದರು. ಆದರೆ, ಬೌಲಿಂಗ್ ವೇಳೆ ಎದುರಾಳಿ ಮೇಲೆ ಒತ್ತಡ ಹೇರಿದರು. ದಕ್ಷಿಣ ಆಫ್ರಿಕಾದ ಸ್ಕೋರಿಂಗ್ ವೇಗವನ್ನು ನಿಯಂತ್ರಣದಲ್ಲಿಡಲು ಮತ್ತು ಆಟವನ್ನು ಇಷ್ಟು ಕೊನೆ ತನಕ ಕೊಂಡೊಯ್ಯಲು ಸಫಲರಾದರು. ರಶೀದ್ ಮತ್ತು ನಬಿ ತಲಾ ಎರಡು ವಿಕೆಟ್ ಪಡೆದರೆ ಇನ್ನೊಂದು ವಿಕೆಟ್ ಮುಜೀಬ್ ಗೆ ಸಿಕ್ಕಿತು . ನೂರ್ ಸ್ವಲ್ಪ ಕಳೆಗುಂದಿದರು. ನವಿನ್ ಉಲ್ ಹಕ್ ಕೂಡ ದುಬಾರಿಯಾದರು.
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…