ನಾಗಪುರ: – ಸಂಗೀತ ಇದು ಮಾನವಕುಲಕ್ಕೆ ಭಗವಂತನಿಂದ ದೊರೆತಿರುವ ಒಂದು ಅಮೂಲ್ಯ ಸಂಪತ್ತು. ಸಂಗೀತದ ಮೂಲಕ ಮನುಷ್ಯ ಒತ್ತಡಮುಕ್ತನಾಗಬಹುದು. ಭಗವಂತನೊಂದಿಗೆ ಏಕರೂಪತೆ ಅನುಭವಿಸಬಹುದು; ಆದರೆ ಈಗ ಸಂಗೀತಕ್ಕೆ ಅಶಾಂತಿ ಮತ್ತು ನಾಶದ ಮಾಧ್ಯಮವನ್ನಾಗಿ ಮಾಡಲಾಗುತ್ತಿದೆ, ಹೀಗೆಂದು ಜಗತ್ತಿನಾದ್ಯಂತ ಇರುವ ಸಮಾಜಶಾಸ್ತ್ರಜ್ಞರು ನಿರಂತರ ಕಳವಳ ವ್ಯಕ್ತಪಡಿಸುತ್ತಿರುತ್ತಾರೆ. ಭಾರತೀಯ ಶಾಸ್ತ್ರೀಯ ಸಂಗೀತವು ಪಾಶ್ಚಿಮಾತ್ಯ ಸಂಗೀತದ ತುಲನೆಯಲ್ಲಿ ವಿವಿಧ ರೀತಿಯ ಕಾಯಿಲೆಗಳನ್ನು ಕಡಿಮೆ ಮಾಡುವುದರ ಜೊತೆಗೆ ಆಧ್ಯಾತ್ಮಿಕ ಸ್ತರದಲ್ಲಿಯೂ ಪರಿಣಾಮಕಾರಿ ಆಗಿದೆಯೆಂದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ, ಹೀಗೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ವಿಶಾರದೆ ಕು. ತೇಜಲ ಪಾತ್ರಿಕರ ಇವರು ಪ್ರತಿಪಾದಿಸಿದ್ದಾರೆ. ಅವರು ರಾಮಟೇಕ (ನಾಗಪುರ)ನ ‘ಕವಿ ಕುಲಗುರು ಕಾಲೀದಾಸ ಸಂಸ್ಕೃತ ವಿದ್ಯಾಪೀಠ’ ಆಯೋಜಿಸದ್ದ ‘ಇಂಡಿಯನ್ ನಾಲೆಜ್ ಸಿಸ್ಟಮ್ – ಫ್ಯೂಚರ್ ಡೈಮೆಂಶನ್’ ಈ ಅಂತರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಆನ್ಲೈನ್ ನಲ್ಲಿ ಮಾತನಾಡುತ್ತಿದ್ದರು. ಅವರು ಈ ಪರಿಷತ್ತಿನಲ್ಲಿ ‘ಸಂಗೀತ ಚಿಕಿತ್ಸೆಯಲ್ಲಿ ಭಾರತೀಯ ಸಂಗೀತದ ಮಹತ್ವ’ ಈ ವಿಷಯದ ಕುರಿತು ಶೋಧ ಪ್ರಬಂಧ ಪ್ರಸ್ತುತಪಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಶೋಧ ಪ್ರಬಂಧದ ಮಾರ್ಗದರ್ಶಕರು, ಹಾಗೂ ಕು. ತೇಜಲ ಪಾತ್ರಿಕರ ಇದರ ಲೇಖಕರಾಗಿದ್ದಾರೆ.
ಸಂಗೀತ ವಿಶಾರದೆ ಕು. ತೇಜಲ ಪಾತ್ರಿಕರ ಮಾತು ಮುಂದುವರೆಸಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಹೈ ಬಿಪಿ ಇರುವ ವ್ಯಕ್ತಿಯ ಮೇಲೆ ಭಾರತೀಯ ಶಾಸ್ತ್ರೀಯ ಸಂಗೀತ, ದೇವರ ನಾಮಜಪ, ಬೀಜ ಮಂತ್ರ, ಓಂಕಾರ ಹಾಗೂ ವಿದೇಶಿ ‘ಮಾರ್ಕೊನಿ ಯೂನಿಯನ್’ನ ‘ವೆಟಲೇಸ್’ ಈ ಸಂಗೀತಗಳ ಪರಿಣಾಮಗಳು ಹೇಗಿರುತ್ತವೆ ಎಂದು ಅಧ್ಯಯನ ಮಾಡಲಾಯಿತು. ಈಗ ಮಾರ್ಕೊನಿ ಯೂನಿಯನ್ ಇದು ಒತ್ತಡ ಕಡಿಮೆ ಮಾಡಲು ಮತ್ತು ವೆಟಲೇಸ್ ಇದು ರಕ್ತದೊತ್ತಡ ಕಡಿಮೆ ಆಗುವುದಕ್ಕಾಗಿ ಜಗತ್ಪ್ರಸಿದ್ಧವಾಗಿದೆ. ಈ ಸಂಶೋಧನಾತ್ಮಕ ಪರೀಕ್ಷೆಗಾಗಿ ತಜ್ಞ ಡಾಕ್ಟರರ ಸಾರಥ್ಯದಲ್ಲಿ ರಕ್ತದೊತ್ತಡ ಇರುವ ಕೆಲವು ರೋಗಿಗಳನ್ನು ಆಯ್ಕೆ ಮಾಡಲಾಗಿತ್ತು. ಸಂಶೋಧನೆಗಾಗಿ ಯೂನಿವರ್ಸಲ್ ಔರಾ ಸ್ಕ್ಯಾನರ್ನ ಬಳಕೆಯನ್ನೂ ಮಾಡಲಾಗಿತ್ತು.
ಈ ಪ್ರಯೋಗದಲ್ಲಿ ಭಾರತೀಯ ಸಂಗೀತದಲ್ಲಿನ ‘ರಾಗ ಗೋರಕಕಲ್ಯಾಣ’ ಕೇಳಿದ ನಂತರ ಮರುದಿನ ಬೆಳಿಗ್ಗೆ ಎಲ್ಲರ ರಕ್ತದೊತ್ತಡ ಪರೀಕ್ಷಿಸಲಾಯಿತು. ಆ ಸಮಯದಲ್ಲಿ 5 ರಲ್ಲಿ 4 ಜನರ ರಕ್ತದೊತ್ತಡ ಸಂಗೀತ ಕೇಳುವ ಮೊದಲು ಅವರ ಬಿಪಿಯ ತುಲನೆಯಲ್ಲಿ ಕಡಿಮೆಯಾಗಿತ್ತು. ಒಬ್ಬರ ಬಿಪಿ ಸಾಮಾನ್ಯವಾಗಿತ್ತು. ‘ಹೆಚ್ಚಿದ್ದ ಬಿಪಿಯು ಕಡಿಮಯಾಗಿ 72 ಗಂಟೆಗಳವರೆಗೆ ಯಾವುದೇ ಔಷಧೋಪಚಾರ ಮಾಡದೇ ಹಾಗೆಯೇ ಉಳಿಯಿತು’, ಇದು ವೈಶಿಷ್ಟ್ಯ ಪೂರ್ಣವಾಗಿತ್ತು. ಸಂಗೀತ ಕೇಳಿದ ನಂತರ ವ್ಯಕ್ತಿಯ ನಕಾರಾತ್ಮಕ ಶಕ್ತಿ ಸರಾಸರಿ ಶೇಕಡ 60 ರಷ್ಟು ಕಡಿಮೆಯಾಗಿತ್ತು ಮತ್ತು ಅವರ ಸಕಾರಾತ್ಮಕ ಶಕ್ತಿಯಲ್ಲಿ ಸರಾಸರಿ ಶೇಕಡ 155 ರಷ್ಟು ಹೆಚ್ಚಳವಾಗಿತ್ತು. ಇದೇ ರೀತಿ ಶಾಸ್ತ್ರೀಯ ಸಂಗೀತದ ಜೊತೆಗೆ ದೇವರ ನಾಮಜಪ, ಬೀಜಮಂತ್ರ ಮತ್ತು ಓಂಕಾರ ಕೇಳಿರುವ ರೋಗಿಗಳ ಮೇಲೆಯೂ ಪರಿಣಾಮವಾಯಿತು.
ಈ ಸಂಶೋಧನೆಯಲ್ಲಿ ಬ್ರಿಟಿಷ್ ಬ್ಯಾಂಡ್ ‘ಮಾರ್ಕೊನಿ ಯೂನಿಯನ್’ನ ವೇಟಲೇಸ್ ಇರುವ ರಿಲ್ಯಾಕ್ಸ್ ಮ್ಯೂಸಿಕ್ ಕೂಡ ಕೇಳಿಸಲಾಯಿತು. ಈ ಪ್ರಯೋಗದ ನಂತರವೂ ಇಬ್ಬರ ಬಿಪಿ ಕಡಿಮೆ ಆಗಿತ್ತು, ಆದರೆ ನಾಡಿ ಬಡಿತ ಹೆಚ್ಚಾಗಿತ್ತು. ಹಾಗೂ ಯುಎಎಸ್ ಯಂತ್ರದ ಮೂಲಕ ಮಾಡಿರುವ ಪರೀಕ್ಷೆಯಲ್ಲಿ ಅವರ ನಕಾರಾತ್ಮಕತೆಯು ಸರಾಸರಿ ಶೇಕಡ 53 ರಷ್ಟು ಹೆಚ್ಚಳವಾಗಿತ್ತು, ಹಾಗೂ ಒಬ್ಬರ ಸಕಾರಾತ್ಮಕತೆಯ ಪ್ರಭಾವಲಯ ಶೇಕಡ 53 ರಷ್ಟು ಕಡಿಮೆ ಆಗಿತ್ತು ಮತ್ತು ಇನ್ನೊಬ್ಬರ ಸಕಾರಾತ್ಮಕ ಪ್ರಭಾವಲಯ ಸಂಪೂರ್ಣವಾಗಿ ಕಡಿಮೆ ಆಗಿತ್ತು . ಇದರಿಂದ ಭಾರತೀಯ ಸಂಗೀತ ಮತ್ತು ನಾದ ಚಿಕಿತ್ಸೆಯಿಂದ ಖಾಯಿಲೆ ನಿಶ್ಚಿತವಾಗಿ ಕಡಿಮೆಯಾಗುತ್ತದೆ ಎಂಬುದು ಗಮನಕ್ಕೆ ಬರುತ್ತದೆ. ಅಷ್ಟೇ ಅಲ್ಲದೆ ವ್ಯಕ್ತಿಯ ಸಕಾರಾತ್ಮಕ ಪ್ರಭಾವಲಯ ಹೆಚ್ಚುತ್ತದೆ, ಆದೆ ಪಶ್ಚಿಮಾತ್ಯ ಸಂಗೀತದಿಂದ ಕಾಯಿಲೆ ಕಡಿಮೆ ಆದರೂ ಸಕಾರಾತ್ಮಕತೆ ಕಡಿಮೆಯಾಗಿ ನಕಾರಾತ್ಮಕತೆ ಹೆಚ್ಚುತ್ತದೆ. ಭಾರತೀಯ ಸಂಗೀತ ಅಥವಾ ನಾದದಲ್ಲಿ ಮೂಲತಃ ಸಕಾರಾತ್ಮಕ ಶಕ್ತಿ (ಚೈತನ್ಯ) ಇದೆ. ಇದರ ಪರಿಣಾಮ ಭವಿಷ್ಯದಲ್ಲಿ ಉಳಿಯುತ್ತದೆ. ಭಾರತೀಯ ಸಂಗೀತದಿಂದ ರೋಗಿಗಳಿಗೆ ಸಕಾರಾತ್ಮಕ ಶಕ್ತಿ ಹೆಚ್ಚು ಪ್ರಮಾಣದಲ್ಲಿ ದೊರೆಯುವುದರಿಂದ ಅವರ ರೋಗ ನಿರೋಧಕ ಕ್ಷಮತೆಯೂ ಹೆಚ್ಚುತ್ತದೆ. ಹಾಗೂ ಯಾವುದೇ ‘ಸೈಡ್ ಎಫೆಕ್ಟ್ಸ್ ’ ಆಗುವುದಿಲ್ಲ.
ತಮ್ಮ ಸವಿನಯ, ಶ್ರೀ. ಆಶಿಶ್ ಸಾವಂತ, ಸಂಶೋಧನಾ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ (ಸಂಪರ್ಕ : 9561574972)
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…