ವಾಶಿಂಗ್ಟನ್ ಡಿಸಿ: ಕಳೆದ 11 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಭಾರತೀಯ ಮೂಲದ ಅಮೆರಿಕ ವಿದ್ಯಾರ್ಥಿ ವರುಣ್ ರಾಜ್ ಪೂಚಾ ನಿಧನರಾಗಿದ್ದಾರೆ.
ಚಿಕಾಗೋದ ವಲ್ಪೈರೈಸೋ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ, 24 ವರ್ಷದ ವರುಣ್ ರಾಜ್ ಮೇಲೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ 24ರ ಹರೆಯದ ವಿದ್ಯಾರ್ಥಿ ಜೋರ್ಡಾನ್ ಆ್ಯಂಡ್ರೆಡ್ ಅಕ್ಟೋಬರ್ 29 ರಂದು ಹಲ್ಲೆ ನಡೆಸಿದ್ದರು. ತಲೆಗೆ ತೀವ್ರವಾಗಿ ಗಾಯಗೊಂಡ ವರುಣ್ ರಾಜ್‌ನನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಕಳೆದ 11 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ವರುಣ್ ರಾಜ್ ಮೃತಪಟ್ಟಿದ್ದಾರೆ. ಆದರೆ ಆರೋಪಿ ಪೊಲೀಸರಿಗೆ ನೀಡಿರುವ ಹೇಳಿಕೆ ಇದೀಗ ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಆತಂಕ ಹೆಚ್ಚಿಸಿದೆ.
ಜಿಮ್‌ನಲ್ಲಿನ ಮಸಾಜ್ ಕೋಣೆಯಲ್ಲಿದ್ದ ವರುಣ್ ರಾಜ್ ಮೇಲೆ ಏಕಾಏಕಿ ಆರೋಪಿ ಜೋರ್ಡಾನ್ ಆ್ಯಂಡ್ರೆಡ್ ದಾಳಿ ನಡೆಸಿದ್ದರು. ಕಬ್ಬಿಣದ ರಾಡ್, ಜಿಮ್ ಡಂಬಲ್ಸ್ ಮೂಲಕ ತಲೆ ಮೇಲೆ ಹಲ್ಲೆ ನಡೆಸಿದ್ದರು. ಘಟನೆ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ವರುಣ್ ರಾಜ್‌ನನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಇತ್ತ ಆರೋಪಿ ಜೋರ್ಡಾನ್‌ನನ್ನು ಪೊಲೀಸರು ಬಂಧಿಸಿದ್ದರು.
ಮಸಾಜ್ ಕೋಣೆಯಲ್ಲಿ ವ್ಯಕ್ತಿಯನ್ನು ನೋಡಿದೆ. ಆತ ವಿಚಿತ್ರವಾಗಿದ್ದ. ಹೀಗಾಗಿ ಆತನ ಮೇಲೆ ಹಲ್ಲೆ ಮಾಡಿದ್ದೆ. ಆತನ ನೋಡುವಾಗಲೇ ನನ್ನ ಆಕ್ರೋಶ ಹೆಚ್ಚಾಗುತ್ತಿತ್ತು. ಆತ ಬದುಕುಳಿಯ ಬಾರದು ಎಂದೇ ದಾಳಿ ನಡೆಸಿದ್ದೇನೆ ಎಂದು ಜೋರ್ಡಾನ್ ಹೇಳಿದ್ದಾನೆ. ಆತನ ತಲೆಗೆ ಹಲ್ಲೆ ಮಾಡಿರುವುದಾಗಿ ಪೊಲೀಸ್ ವಿಚಾರಣೆಯಲ್ಲಿ ಆರೋಪಿ ಜೋರ್ಡಾನ್ ಹೇಳಿದ್ದಾನೆ.
ಈ ಹೇಳಿಕೆಯಿಂದ ಅಮೆರಿಕದಲ್ಲಿ ವ್ಯಾಸಾಂಗ ಮಾಡುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿಗಳ ಸುರಕ್ಷತೆ ಅನುಮಾನ ಹೆಚ್ಚಾಗಿದೆ. ಭಾರತೀಯ ವಿದ್ಯಾರ್ಥಿಗಳ ಮೇಲೆ ಇದೇ ರೀತಿ ದಾಳಿ ಮುಂದುವರಿಯುವ ಸಾಧ್ಯತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ವರುಣ್ ರಾಜ್ ಸಾವಿನ ಕುರಿತು ವಲ್ಪೈರೈಸೋ ವಿಶ್ವವಿದ್ಯಾಲಯ ಕಂಬನಿ ಮಿಡಿದಿದೆ. ನಮ್ಮ ಕ್ಯಾಂಪಸ್ ವಿದ್ಯಾರ್ಥಿಯ ಸಾವು ತೀವ್ರ ನೋವು ತಂದಿದೆ. ಅವರ ಪೋಷಕರು, ಕುಟುಂಬ, ಆಪ್ತರಿಗೆ ದುಖದಲ್ಲಿ ನಾವು ಭಾಗಿಯಾಗಿದ್ದೇವೆ. ವರುಣ್ ಕುಟುಂಬದ ಜೊತೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ ನಿರಂತರ ಸಂಪರ್ಕದಲ್ಲಿದೆ. ಕುಟುಂಬಕ್ಕೆ ಎಲ್ಲಾ ನೆರವು ನೀಡಲಾಗುತ್ತದೆ. ವರುಣ್ ಮೃತದೇಹ ಹಸ್ತಾಂತರಿಸಲು ವ್ಯವಸ್ಥೆ ಮಾಡಿದ್ದೇವೆ. ನಮ್ಮ ರಾಜತಾಂತ್ರಿಕ ಅಧಿಕಾರಿಗಳ ಜೊತೆಗೂ ಸಂಪರ್ಕದಲ್ಲಿದ್ದೇವೆ ಎಂದು ಲ್ಪೈರೈಸೋ ವಿಶ್ವವಿದ್ಯಾಲಯ ಹೇಳಿದೆ.
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…