ಪಣಜಿ: 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಪುರುಷರ ಹಾಕಿ ತಂಡ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದೆ.
ಬುಧವಾರ ಫೈನಲ್‌ನಲ್ಲಿ ರಾಜ್ಯ ತಂಡಕ್ಕೆ ಹರ್ಯಾಣ ವಿರುದ್ಧ 3-5 ಗೋಲುಗಳಿಂದ ಸೋಲು ಎದುರಾಯಿತು. ರಾಜ್ಯ ತಂಡ ಟೂರ್ನಿಯುದ್ದಕ್ಕೂ ಅಭೂತಪೂರ್ವ ಪ್ರದರ್ಶನ ತೋರಿತ್ತು. ಆದರೆ ಫೈನಲ್‌ನಲ್ಲಿ ನಿರೀಕ್ಷಿತ ಆಟ ಕಂಡು ಬರಲಿಲ್ಲ.
ಸದ್ಯ ಕರ್ನಾಟಕ 29 ಚಿನ್ನ, 29 ಬೆಳ್ಳಿ, 31 ಕಂಚು ಸೇರಿದಂತೆ 91 ಪದಕ ಗೆದ್ದಿದ್ದು, ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ.