ಪುಣೆ: ಸತತ ಐದು ಪಂದ್ಯಗಳಲ್ಲಿ ಸೋತಿದ್ದ ಇಂಗ್ಲೆಂಡ್ ತಂಡವು ಬುಧವಾರ ನೆದರ್ಲೆಂಡ್ಸ್ ವಿರುದ್ಧ ಜಯಿಸಿತು.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಬೆನ್ ಸ್ಟೋಕ್ಸ್ (108; 84ಎಸೆತ, 4X6, 6X6) ಅಮೋಘ ಶತಕದ ಬಲದಿಂದ ಇಂಗ್ಲೆಂಡ್ ತಂಡವು 160 ರನ್‌ಗಳ ಅಂತರದಿಂದ ನೆದರ್ಲೆಂಡ್ಸ್‌ಗೆ ಸೋಲುಣಿಸಿತು.
ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸ್ಟೋಕ್ಸ್ ಶತಕ, ಡೇವಿಡ್ ಮಲಾನ್ ಮತ್ತು ಕ್ರಿಸ್ ವೋಕ್ಸ್ ಅವರ ಅರ್ಧಶತಕಗಳ ಬಲದಿಂದ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 339 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಡಚ್ ಬಳಗಕ್ಕೆ 37.2 ಓವರ್‌ಗಳಲ್ಲಿ 179 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಸ್ಪಿನ್ನರ್ ಮೋಯಿನ್ ಅಲಿ ಮತ್ತು ಆದಿಲ್ ರಶೀದ್ ಅವರು ತಲಾ ಮೂರು ವಿಕೆಟ್ ಗಳಿಸಿದರು.
ಇಂಗ್ಲೆಂಡ್: 50 ಓವರ್‌ಗಳಲ್ಲಿ 9ಕ್ಕೆ339 (ಡೇವಿಡ್ ಮಲಾನ್ 87, ಜೋ ರೂಟ್ 28, ಬೆನ್ ಸ್ಟೋಕ್ಸ್ 108, ಕ್ರಿಸ್ ವೋಕ್ಸ್ 51, ಆರ್ಯನ್ ದತ್ 67ಕ್ಕೆ2, ವ್ಯಾನ್ ಬೀಕ್ 88ಕ್ಕೆ2, ಬೆಸ್ ಡಿ ಲೀಡ್ 74ಕ್ಕೆ3)
ನೆದರ್ಲೆಂಡ್ಸ್: 37.2 ಓವರ್‌ಗಳಲ್ಲಿ 179 (ವೆಸ್ಲಿ ಬೆರಿಸಿ 37, ಸೈಬ್ರ್ಯಾಂಡ್ ಏಂಜೆಲ್‌ಬ್ರೆಚ್ಟ್ 33, ಸ್ಕಾಟ್ ಎಡ್ವರ್ಡ್ಸ್ 38, ತೇಜ ನಿಡಮಾನೂರು ಔಟಾಗದೆ 41, ಡೇವಿಡ್ ವಿಲಿ 19ಕ್ಕೆ2, ಮೋಯಿನ್ ಅಲಿ 42ಕ್ಕೆ3, ಆದಿಲ್ ರಶೀದ್ 54ಕ್ಕೆ3)