ಪುತ್ತೂರು

ಪುತ್ತೂರಿಗೆ ಬಂದ ‘ಪಲ್ಲಕ್ಕಿ’ ಬಸ್

ಪುತ್ತೂರು: ನ.7ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ದಿಂದ ಅತ್ಯಾಕರ್ಷಕ ಬಣ್ಣ ಹಾಗೂ ವಿನ್ಯಾಸಗಳೊಂದಿಗೆ ಲೋಕಾರ್ಪಣೆಗೊಂಡಿರುವ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್‌ಗಳು ಪುತ್ತೂರು ವಿಭಾಗಕ್ಕೆ ಆಗಮಿಸಿತು.

Advertisement
Advertisement
Advertisement

4 ಬಸ್‌ಗಳ ಪೈಕಿ 2 ಬಸ್‌ಗಳು ಆಗಮಿಸಿದ್ದು‌ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ರಿಬ್ಬನ್ ಕತ್ತರಿಸಿ, ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.

‘ಸಂತೋಷವು ಪ್ರಯಾಣಿಸುತ್ತಿದೆ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ನಿರ್ಮಾಣಗೊಂಡಿರುವ ಈ ಬಸ್ 11.3 ಮೀಟರ್ ಉದ್ದದ 222 ವೀಲ್ ಬೇಸ್ ವೈಕಿಂಗ್ ಲೈಲ್ಯಾಂಡ್ ಚಾಸಿಗಳ ಮೇಲೆ ಈ ನಿರ್ಮಾಣಗೊಂಡಿದೆ. ಬಿಎಸ್-6 ತಂತ್ರಜ್ಞಾನ ಮಾದರಿಯ 197 ಹೆಚ್‌ಪಿ ಇಂಜಿನ್, ಸುಸಜ್ಜಿತವಾಗಿ ವಿನ್ಯಾಸಗೊಳಿಸಿದ 30 ಸ್ಲೀಪರ್ ಬರ್ತ್ ಸೀಟುಗಳು, ಎ-.ಡಿ.ಎಸ್.ಎಸ್ ಸಿಸ್ಡಮ್ಸ್, ಪ್ರತಿ ಸೀಟಿಗೆ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳ ಚಾರ್ಜಿಂಗ್ ಸೌಲಭ್ಯ ಹಾಗೂ ಮೊಬೈಲ್ ಸ್ಟ್ಯಾಂಡ್ ವ್ಯವಸ್ಥೆ, ಎಲ್.ಇ.ಡಿ ಪ್ರದರ್ಶಿತ ಬಸ್ ಬರ್ತ್ ಸೀಟುಗಳ ಸಂಖ್ಯೆ, ಓದಲು ಉತ್ತಮ ಬೆಳಕಿನ ಎಲ್.ಇ.ಡಿ ದೀಪಗಳ ಅಳವಡಿಕೆ, ಆಡಿಯೋ ಸ್ಪೀಕರ್‌ಗಳ ಅಳವಡಿಕೆ ಹಾಗೂ ಸಾರ್ವಜನಿಕ ಮಾಹಿತಿ, ಡಿಜಿಟಲ್ ಗಡಿಯಾರ, ಎಲ್.ಇ.ಡಿ ನೆಲಹಾಸು, ಪ್ರತಿ ಪ್ರಯಾಣಿಕರಿಗೆ ಚಪ್ಪಲಿ ಇಡಲು ಸ್ಥಳಾವಕಾಶ ವ್ಯವಸ್ಥೆ, ಪ್ರಯಾಣಿಕರಿಗೆ ತಲೆದಿಂಬು ವ್ಯವಸ್ಥೆ, ಚಾಲಕರಿಗೆ ಸಹಕಾರಿಯಾಗುವಂತೆ ಹಿನ್ನೋಟ ಕ್ಯಾಮರಾಗಳ ಅಳವಡಿಕೆ ಮೊದಲಾದ ವಿಶೇಷತೆಗಳನ್ನು ಒಳಗೊಂಡಿದೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ , ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ವಿಭಾಗೀಯ ಸಂಚಲಣಾಧಿಕಾರಿ ಮುರಳಿಧರ ಆಚಾರ್ಯ, ವಿಭಾಗೀಯ ಯಾಂತ್ರಿಕ ಶಿಲ್ಪಿ ನಂದ ಕುಮಾರ್, ಹಿರಿಯ ಘಟಕ ವ್ಯವಸ್ಥಾಪಕ ಇಸ್ಮಾಯಿಲ್, ಕಾರ್ಮಿಕ ಕಲ್ಯಾಣಾಧಿಕಾರಿ ಕೆ.ಕೆ ಸೋಮಶೇಖರ, ಸಹಾಯಕ ಲೆಕ್ಕಾಧಿಕಾರಿ ಆಶಾಲತಾ, ಸಹಾಯಕ ಆಡಳಿತಾಧಿಕಾರಿ ರೇವತಿ, ಸಹಾಯಕ ಕಾನೂನು ಅಧಿಕಾರಿ ಸೌಮ್ಯ, ಸಹಾಯಕ ಸಂಖ್ಯಾಧಿಕಾರಿ ಜ್ಯೋತಿ, ಸಿಬಂದಿ ಅಧೀಕ್ಷಕ ಮಹಮ್ಮದ್ ಹುಸೈನ್, ಸಂಚಾರ ನಿಯಂತ್ರಕ ಕೋಚಣ್ಣ ಪೂಜಾರಿ,ಸುಬ್ರಹ್ಮಣ್ಯ ಭಟ್, ಮೇಲ್ವಿಚಾರಕ ಅಬ್ಬಾಸ್ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

ommnews

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago