ಸಶಸ್ತ್ರ ಪಡೆಗಳಲ್ಲಿರುವ ಎಲ್ಲಾ ಮಹಿಳೆಯರಿಗೆ ಸಮಾನ ರೀತಿಯ ರಜೆ ಘೋಷಿಸಿದ ಮೋದಿ ಸರ್ಕಾರ!

By: Ommnews

Date:

Share post:

ನವದೆಹಲಿ: ಈ ಬಾರಿಯ ದೀಪಾವಳಿ ಹಬ್ಬಕ್ಕೆ ಮೋದಿ ಸರ್ಕಾರ ಮಹಿಳಾ ಯೋಧರಿಗೆ ಬಂಪರ್ ಕೊಡುಗೆ ಘೋಷಿಸಿದೆ. ಭಾರತೀಯ ಸೇನೆ, ನೌಕಾಪಡೆ ಹಾಗೂ ವಾಯುಸೇನೆಯ ಎಲ್ಲಾ ಮಹಿಳಾ ಯೋಧರು, ಅಧಿಕಾರಿಗಳು, ಯಾವುದೇ ರ್ಯಾಂಕ್‌ನಲ್ಲಿರುವ ಮಹಿಳೆಯರಿಗೆ ಒಂದೇ ರೀತಿಯ ರಜಾ ಸೌಲಭ್ಯ ಘೋಷಿಸಿದೆ. ಮೆಟರ್ನಿಟಿ ರಜೆ, ಮಕ್ಕಳ ಪಾಲನೆ ರಜನೆ, ಮಕ್ಕಳ ದತ್ತು ಪಾಲನೆ ರಜೆ ಸೇರಿದಂತೆ ಎಲ್ಲಾ ರಜಾ ಸೌಲಭ್ಯಗಳು ಮಹಿಳೆಯರಿಗೆ ಸಮಾನವಾಗಿ ಸಿಗಲಿದೆ.

Advertisement
Advertisement
Advertisement

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಹಿಳಾ ಯೋಧರ ರಜೆ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ. ಭದ್ರತಾ ಪಡೆಯಲ್ಲಿರುವ ಎಲ್ಲಾ ಮಹಿಳಾ ಯೋಧರು, ಅಧಿಕಾರಿಗಳು ಸೇರಿದಂತೆ ಎಲ್ಲಾ ಶ್ರೇಣಿಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಸಮಾನ ರಜಾ ಸೌಲಭ್ಯ ನೀಡಲಾಗಿದೆ. ಈ ಕುರಿತು ರಾಜನಾಥ್ ಸಿಂಗ್ ಘೋಷಣೆ ಮಾಡಿದ್ದಾರೆ.

ಸಶಸ್ತ್ರ ಪಡೆಗಳಲ್ಲಿರುವ ಎಲ್ಲಾ ಮಹಿಳೆಯರಿಗೆ ಸಮಾನರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ರಜೆ ನಿಯಮಗಳ ವಿಸ್ತರಣೆಯಿಂದ ಮಹಿಳಾ ಯೋಧರ ಮಕ್ಕಳ ಪಾಲನೆ, ಮೆಟರ್ನಿಟಿ ರಜೆಗಳಿಗೆ ಅನೂಕೂಲವಾಗಿದೆ. ಮಹಿಳೆಯರು ಕುಟುಂಬದ ಜವಾಬ್ದಾರಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಹೀಗಾಗಿ ಮಹಿಳಾ ಯೋಧರಿಗೂ ಇತರ ಶ್ರೇಣಿಯಲ್ಲಿರು ಮಹಿಳಾ ಅಧಿಕಾರಿಗಳಂತೆ ರಜೆ ಅವಶ್ಯಕತೆ ಇತ್ತು. ಈ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ನಿರ್ಧಾರದಿಂದ ವೃತ್ತಿಪರ ಹಾಗೂ ಕೌಟುಂಬಿಕ ಕ್ಷೇತ್ರದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದಿದ್ದಾರೆ.

Share post:

LEAVE A REPLY

Please enter your comment!
Please enter your name here