ಬ್ರೆಜಿಲ್‌ನ ಅಮೆಜಾನ್ ಪ್ರದೇಶದಲ್ಲಿ ವಿಮಾನ ಅಪಘಾತ – 12 ಮಂದಿ ಸಾವು

0
99

ಬ್ರೆಜಿಲ್‌: ಬ್ರೆಜಿಲ್‌ನ ಅಮೆಜಾನ್ ಪ್ರದೇಶದಲ್ಲಿ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿದ್ದು, ಒಂದು ಮಗು ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಎಕರೆ ರಾಜ್ಯದ ರಾಜಧಾನಿ ರಿಯೊ ಬ್ರಾಂಕೊದಲ್ಲಿನ ಮುಖ್ಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ.

ಘಟನೆಯಲ್ಲಿ ಒಂಬತ್ತು ವಯಸ್ಕರು ಮತ್ತು ಒಂದು ಮಗು ಸೇರಿದಂತೆ ಒಟ್ಟು ಹತ್ತು ಪ್ರಯಾಣಿಕರು ಮತ್ತು ಪೈಲಟ್ ಹಾಗೂ ಸಹ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಬ್ರೆಜಿಲ್‌ನ ಪೆರು ಮತ್ತು ಬೊಲಿವಿಯಾದ ಗಡಿಯ ಸಮೀಪವಿರುವ ದೂರದ ಪ್ರದೇಶದಲ್ಲಿ ವಿಮಾನ ಪತನವಾಗಿದ್ದು, ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಅನೇಕ ಪ್ರಯಾಣಿಕರು ವೈದ್ಯಕೀಯ ಆರೈಕೆಯ ನಂತರ ನೆರೆಯ ಅಮೆಜಾನಾಸ್ ರಾಜ್ಯಕ್ಕೆ ಮರಳುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

LEAVE A REPLY

Please enter your comment!
Please enter your name here