ವಿದ್ಯುತ್ ಸಂಪರ್ಕ ತೆಗೆಯಲು ಮುಂದಾದ ಮೆಸ್ಕಾಂ ಸಿಬ್ಬಂದಿಗೆ ಹೋಟೆಲ್ ಮಾಲಕನಿಂದ ಹಲ್ಲೆ

0
84

ಸುಳ್ಯ: ಸುಳ್ಯದ ಹೋಟೆಲೊಂದರ ಮಾಲಕರು ಕರೆಂಟ್ ಬಿಲ್ ಕಟ್ಟಿಲ್ಲವೆಂದು ಮೆಸ್ಕಾಂ ಸಿಬ್ಬಂದಿಯೊಬ್ಬರು ನಿಯಮದಂತೆ ವಿದ್ಯುತ್ ಸಂಪರ್ಕ ತೆಗೆಯಲು ಹೋಗಿದ್ದಾರೆ.ಹೋಟೆಲಿನ ವಿದ್ಯುತ್ ಬಿಲ್‌ ಬಗ್ಗೆ ವಿಚಾರಿಸಲೆಂದು ಹೋದಾಗ ಹೋಟೆಲ್ ಮಾಲಕರು ಮೆಸ್ಕಾಂ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಮೆಸ್ಕಾಂ ಸಿಬ್ಬಂದಿ ರಾಮಪ್ಪ ಪೈಚಾರು ಭಾಗದ ಲೈನ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಹಲ್ಲೆಗೊಳಗಾದ ರಾಮಪ್ಪ ಸುಳ್ಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆಗೆ ಸಂಬಂಧ ಪಟ್ಟ ಹಾಗೆ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ.

LEAVE A REPLY

Please enter your comment!
Please enter your name here