ವಿಶ್ವ ಬಂಟರ ಸಮ್ಮೇಳನ: ಆಕರ್ಷಕ ಪಥ ಸಂಚಲನದ ಮೂಲಕ ಬಂಟರ ಒಗ್ಗಟ್ಟು ಪ್ರದರ್ಶನ

By: Ommnews

Date:

Share post:

ಉಡುಪಿ : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ‌ ಇಲ್ಲಿ ಏರ್ಪಡಿಸಿರುವ ‘ವಿಶ್ವ ಬಂಟರ ಸಮ್ಮೇಳನ 2023’ರ ಅಂಗವಾಗಿ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಆಕರ್ಷಕ ಪಥ ಸಂಚಲನ ತುಳುನಾಡಿನ ನೆಲದ ಸಂಸ್ಕೃತಿ ಮತ್ತು ಬಂಟರ ನಡುವಿನ ನಂಟಿನ ಪ್ರದರ್ಶನಕ್ಕೆ ವೇದಿಕೆಯಾಯಿತು‌.

Advertisement
Advertisement
Advertisement

ಪಥ ಸಂಚಲನದಲ್ಲಿ ಸಾಗಿಬಂದ ಕಂಬಳದ ಕೋಣಗಳು, ಹುಲಿ ವೇಷಧಾರಿಗಳು, ಚೆಂಡೆವಾದನ, ಯಕ್ಷಗಾನ ವೇಷ, ನೊಗ, ನೇಗಿಲು, ಏತ ನೀರಾವರಿಯ, ಮೊರಾಯಿ, ಮೊರ, ಕಲಶ, ಮೊದಲಾದ ಕೃಷಿ ಪರಿಕರಗಳೊಂದಿಗೆ ಸಾಗಿ ಬಂದ‌ ಬಂಟರ ಸಂಘದ ಪ್ರತಿನಿಧಿಗಳು ನೆಲದ ಸಂಪ್ರದಾಯಗಳ ಕುರಿತು ತಮಗೆಷ್ಟು ತುಡಿತವಿದೆ ಎಂಬುದನ್ನು ತೋರ್ಪಡಿಸಿದರು.

ಒಪ್ಪ ಓರಣವಾಗಿ ಸಮವಸ್ತ್ರ ಧರಿಸಿ ಬಿಗುಮಾನದಿಂದ ಹೆಜ್ಜೆ ಹಾಕಿದ ಬಂಟರ‌ ಸಂಘಗಳ ಪ್ರತಿನಿಧಿಗಳು ತಮ್ಮ ಸಂಘಟನೆಯ ಶಕ್ತಿ, ಸಾಮರ್ಥ್ಯವನ್ನು ಪ್ರದರ್ಶಿಸಿದರು.

ಕೆಲವು ತಂಡಗಳು ರ಼ಾಷ್ಟ್ರಧ್ವಜದಲ್ಲಿರುವ ಕೇಸರಿ ಬಿಳಿ ಹಸಿರು ಬಣ್ಣಗಳ ಸಮವಸ್ತ್ರದ ಮೂಲಕ ಗಮನ ಸೆಳೆದವು. ಕೆಲವು ತಂಡಗಳ ಮಹಿಳಾ ಪ್ರತಿನಿಧಿಗಳು ಕಳಶ ಕೈಯಲ್ಲಿ ಹಿಡಿದು ಸಾಗಿದರೆ, ಮತ್ತೆ ಕೆಲವು ತಂಡಗಳ ಮಹಿಳೆಯರು ರಾಣಿ ಅಬ್ಬಕ್ಕನ ರೀತಿ ವೇಷ ಧರಿಸಿ ಪಥ ಸಂಚಲನದ ಮೆರುಗು ಹೆಚ್ಚಿಸಿದರು. ಇನ್ನು ಕೆಲವು ತಂಡಗಳ ಸದಸ್ಯರು ಆಕರ್ಷಕ ಸೀರೆ, ಧೋತಿಯ ಮೂಲಕ ಕರಾವಳಿಯ ಸಾಂಪ್ರದಾಯಿಕ ಉಡುಪುಗಳ ಗತ್ತುಗೈರತ್ತುಗಳ ಮೂಲಕ ಗಮನ‌ಸೆಳೆದರು. ‌

ಪಡುಬಿದ್ರಿ ತಂಡದ ಜೊತೆ ಸಾಗಿ ಬಂದ ಕಂಬಳದ ಕೋಣ ವೇದಿಕೆಗೆ ನಮಸ್ಕಾರ ಹಾಕುವ ಮೂಲಕ ಗಮನ ಸೆಳೆಯಿತು.

ಒಟ್ಟು 62 ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದವು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section